‘ಬಂಡೆ ಛಿದ್ರ, ಹುಲಿಯಾ ಕಾಡಿಗೆ’ ಎಂಬ ನಳೀನ್ ಕುಮಾರ್ ಹೇಳಿಕೆಗೆ ಡಿ.ಕೆ ಶಿವಕುಮಾರ್ ತಿರುಗೇಟು…

Promotion

ಬೆಂಗಳೂರು,ಅಕ್ಟೋಬರ್,23,2020(www.justkannada.in):  ಚುನಾವಣೆ ಬಳಿಕ ಬಂಡೆ ಛಿದ್ರವಾಗಲಿದೆ. ಹುಲಿಯಾ ಕಾಡಿಗೆ ಹೋಗಲಿದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.jk-logo-justkannada-logo

ಕಟೀಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್, ಸಮಯ ಬಂದಾಗ ಅಶೋಕಣ್ಣಂಗೆ, ರವಿ ಅಣ್ಣಂಗೆ, ಸರ್ವೀಸ್ ಪ್ರೊವೈಡರ್ ಅಶ್ವಥಣ್ಣನಿಗೆ, ಕಟೀಲ್ ಅಣ್ಣನಿಗೆ ಬಂಡೆ ಕಥೆ ಹೇಳುತ್ತೇನೆ. ನಿಮಗೆ ಬಂಡೆ ಕಥೆ ಏನು ಎಂಬುದನ್ನು ಹೇಳುತ್ತೇನೆ. ಅದಕ್ಕೆ ಸಮಯ ಬರಲಿ ಎಂದು ಹೇಳಿದರು.  kpcc president-DK Sivakumar -Nalin Kumar katil- statement –huli-bande

ಇನ್ನು ಹೊರಗಿನಿಂದ ನಾಲ್ಕು ಸಾವಿರ ಜನ ಬಂದಿದ್ದಾರೆ.  ಆರ್ ಆರ್ ನಗರದಲ್ಲಿ ಕೊಲೆಗಳಾಗುವ ಸಾಧ್ಯತೆಯೂ ಇದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಟಾಂಗ್ ನೀಡಿದ ಡಿ.ಕೆ ಶಿವಕುಮಾರ್, ಕೊಲೆ ಮಾಡುವ ಮನೋಭಾವ ಇದ್ದವರು ಹೀಗೆ ಹೇಳ್ತಾರೆ ಎಂದು ಕಿಡಿಕಾರಿದರು.

Key words: kpcc president-DK Sivakumar -Nalin Kumar katil- statement –huli-bande