ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮಾವ ವಿಧಿವಶ: ಮೈಸೂರಿನತ್ತ ಡಿಕೆಶಿ.

Promotion

 

ಮೈಸೂರು,ಅಕ್ಟೋಬರ್,26,2021(www.justkannada.in):  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮಾವ ವಿಧಿವಶರಾದ ಹಿನ್ನೆಲೆ ಡಿ.ಕೆ ಶಿವಕುಮಾರ್ ಮೈಸೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಡಿಕೆ ಶಿವಕುಮಾರ್  ಹೇಳಿಕೆ ನೀಡಿದ್ದು, ತಮ್ಮ ಮಾವನವರಾದ ಮೈಸೂರಿನ ಶ್ರೀ ರಾಜ ಸೋಪ್ ನೆಟ್ ಕಾರ್ಖಾನೆ ಮಾಲೀಕರಾದ ಆರ್. ತಿಮ್ಮಯ್ಯನವರು ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಸಿಂದಗಿಯಲ್ಲಿ ಇಂದು ಹಾಗೂ ಹಾನಗಲ್ ನಲ್ಲಿ ನಾಳೆ ನಡೆಯಲಿರುವ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುತ್ತಿಲ್ಲ.ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಎರಡೂ ಕ್ಷೇತ್ರಗಳ ಮತದಾರರು ಅನ್ಯಥಾ ಭಾವಿಸಬಾರದು ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಿಂದಗಿಯ ಮಾದಿಗರ/ದಂಡೋರಾ ಸಮಾವೇಶದಲ್ಲಿ ಪಾಲ್ಗೊಂಡ ನಂತರ ಹಾಗೂ ಅಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯ ಮುನ್ನ ವಿಷಯ ತಿಳಿದ ಶಿವಕುಮಾರ್ ಅವರು ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿ ಬಿಜಾಪುರದ ಮೂಲಕ ಮೈಸೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

Key words: KPCC president -DK Shivakumar-father-in-law – death- mysore