ಅನುಮತಿ ಕೊಟ್ಟಾಗಲೇ ಕಾರ್ಯಕ್ರಮ: ರದ್ದು ಮಾಡುವ ಪ್ರಶ್ನೆಯೇ ಇಲ್ಲ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್…

kpcc-president-dk-shivakumar-bjp-govrnament-permission
Promotion

ಬೆಂಗಳೂರು,ಜೂ,10,2020(www.justkannada.in):  ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಸಲು ಸರ್ಕಾರ ಅನುಮತಿ ನೀಡದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನ ಬಿಜೆಪಿ ಸ್ನೇಹಿತರಿಗೆ ಹೇಳಲು ಬಯಸುತ್ತೇನೆ ನೀವು ಅನುಮತಿ ಕೊಟ್ಟಾಗಲೇ ಕಾರ್ಯಕ್ರಮವನ್ನ ಮಾಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಕಾರ್ಯಕ್ರಮ ರದ್ಧು ಮಾಡುವ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ  ಸುದ್ದಿಗೋಷ್ಠಿ ನಡೆಸಿ ಇಂದು ಈ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್,  ಪದಗ್ರಹಣ ಕಾರ್ಯಕ್ರಮ ಮಾಡೋದು ಪದ್ದತಿ. ಹಿರಿಯರ ಆಶೀರ್ವಾದ, ಹಿಂದಿನ ಅಧ್ಯಕ್ಷರಿಗೆ ಗೌರವ ನೀಡುವುದು ಧ್ವಜ ಹಸ್ತಾಂತರಿಸುವುದು ಬಂದ ಸಂಪ್ರದಾಯ. ಆದರೆ ಆ ಒಂದು ಕ್ಷಣಕ್ಕೆ ಅಡ್ಡಿ ಉಂಟಾಗುತ್ತಿದೆ.  ಕೋವಿಡ್ -19 ಕಾರಣ ಮೂರು ಬಾರಿ ಕಾರ್ಯಕ್ರಮ ಮುಂದೂಡಿಕೆಯಾಗಿದೆ. ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಕೋರಿ ಸಿಎಂ ಬಿಎಸ್ ವೈಗೆ ಕರೆ ಮಾಡಿದ್ದೆ. ಈ ವೇಳೆ ಮೌಖಿಕ ಆದೇಶ ನೀಡಿದ್ದರು. ಇದರಂತೆ ಭಾನುವಾರ ಕಾರ್ಯಕ್ರಮ ಆಯೋಜಿಸಿದ್ದವು. ಆದರೆ ಭಾನುವಾರ ಕರ್ಫ್ಯೂ ಘೋಷಣೆಯಾಗಿತ್ತು ಎಂದು ತಿಳಿಸಿದರು.

kpcc-president-dk-shivakumar-bjp-govrnament-permission

ಈ ನಡುವೆ ಹಿರಿಯರ ಸಮ್ಮುಖದಲ್ಲಿ ಕಾಂಗ್ರೆಸ್ ಕಚೇರಿ ಮುಂದೆ ಕಾರ್ಯಕ್ರಮ ಮಾಡುತ್ತೇವೆ ಕೇವಲ 150 ಮಂದಿಗೆ ಅವಕಾಶ ನೀಡಿ ಎಂದು ಸಿಎಂ ಬಿಎಸ್ ವೈಗೆ ಕೇಳಿದ್ದೆ. ಬಿಎಸ್ ವೈ ನುಡಿದಂತೆ ನಡೆಯುತ್ತಾರೆ ಎಂದುಕೊಂಡಿದ್ದೆ. ಸಣ್ಣ ರಾಜಕಾರಣ ಮಾಡಲ್ಲ ಅಂತಾ ತಿಳಿದಿದ್ದೆ.  ಕೆಲವರು ಯಾರ್ ಯಾರ್ ಹೋದಾಗ ಏನ್ ಆಯಿತು ಅಂತಾ ನಮಗೆ ಗೊತ್ತು ಎಂದು ಡಿ.ಕೆ ಶಿವಕುಮಾರ್ ಟಾಂಗ್ ನೀಡಿದರು.

ಹಾಗೆಯೇ ಪದಗ್ರಹಣ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದವು. ಅನೇಕ ಕಡೆಗಳಲ್ಲಿ ಟಿ.ವಿ ಅಳವಡಿಕೆ ಮಾಡಿದ್ದವು. ಆದರೆ ಈಗ ಅಧಿಕಾರಿಗಳು ರಾಜಕೀಯ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಅಂತಿದ್ದಾರೆ. ನನ್ನ ಬಿಜೆಪಿ ಸ್ನೇಹತರಿಗೆ ಹೇಳುತ್ತೇನೆ. ನೀವು ಅನುಮತಿ ನೀಡಿದ್ದಾಗಲೇ ಕಾರ್ಯಕ್ರಮ ಮಾಡುತ್ತೇನೆ. ಕಾರ್ಯಕ್ರಮ ರದ್ದು ಪಡಿಸುವ ಪ್ರಶ್ನೆಯೇ ಇಲ್ಲ ಎಂದು ಡಿ.ಕೆ ಶಿವಕುಮಾರ್ ಸವಾಲು ಹಾಕಿದರು.

ಡಿಕೆಶಿ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ಎಂಎಲ್ ಸಿ ಚುನಾವಣೆ ಬಳಿಕ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳುತ್ತೇನೆ. ಕೊರೋನಾ ವಿಚಾರವಾಗಿ ಪರಿಹಾರ ನೀಡಲಾಗಿದ್ಯಾ. ಜನರಿಗೆ ತಲುಪಿದೆಯಾ ಎಂಬುದನ್ನ ಪರಿಶೀಲಿಸುತ್ತೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: KPCC- president- DK Shivakumar- bjp- govrnament- Permission