ಇಂದು ಕೂಡ ಜಿಲ್ಲೆಯಲ್ಲಿ 170 ರ ಗಡಿ ದಾಟಿದ ಕೋವಿಡ್ ಪ್ರಕರಣ: ಯುವಕರಲ್ಲೆ‌ ಅತಿ ಹೆಚ್ಚು ಸೋಂಕು-ಮೈಸೂರು ಡಿಸಿ ರೋಹಿಣಿ ಸಿಂಧೂರಿ…

Kovid case- crossing- 170 borders – Mysore- today-Mysore- DC Rohini Sindhuri.
Promotion

ಮೈಸೂರು,ಏಪ್ರಿಲ್,3,2021(www.justkannada.in): ದಿನೇ ದಿನೇ ಮೈಸೂರಿನಲ್ಲಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿದೆ. ಅದರಲ್ಲೂ ಯುವಕರಲ್ಲೆ‌ ಅತಿ ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.Illegally,Sand,carrying,Truck,Seized,arrest,driver

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ, ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ಪ್ರಕರಣ ಹೆಚ್ಚಾಗುತ್ತಿದ್ದು, ಈ ನಡುವೆ ಸೆಕೆಂಡರಿ ಕಾಂಟ್ಯಾಕ್ಟ್ ನವರು ಟೆಸ್ಟಿಂಗ್ ಮಾಡಿಸಿಕೊಳ್ಳು ಬರುತ್ತಿಲ್ಲ. ಇದರಿಂದ ಮೈಸೂರಿನಲ್ಲಿ‌ ಕೊರೊನಾ‌ ಹೆಚ್ಚಾಗಿದೆ. ಅದರಲ್ಲು ಯುವಕರಲ್ಲೆ‌ ಅತಿ ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಇಂದು ಕೂಡ ಪಾಸಿಟಿವ್ ಪ್ರಕರಣ 170 ರ ಗಡಿ ದಾಟಿದೆ. ಇದರಲ್ಲಿ ನಗರ ಪ್ರದೇಶದಲ್ಲೆ ಹೆಚ್ಚು ಪಾಸಿಟಿವ್ ಪ್ರಕರಣ ಕಾಣಿಸಿಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.

ಸದ್ಯ ಪ್ರತಿದಿನ 6 ಸಾವಿರ ಜನರಿಗೆ ಕೊರೊನಾ‌ ಪರೀಕ್ಷೆ ಮಾಡಲಾಗುತ್ತಿದೆ. ಸಣ್ಣ ವಯಸ್ಸಿನವರಲ್ಲಿ ನಮಗೆ ಕೊರೊನಾ‌ ಬರಲ್ಲ ಎಂಬ ಅಸಡ್ಡೆ ಇದೆ. ಈ‌ ಕಾರಣದಿಂದ ಯುವಕರಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಈ ಬಗ್ಗೆ ಮೈಸೂರು ಜಿಲ್ಲಾಡಳಿ ಅನಾಲಿಸಿಸ್ ಮಾಡಿದೆ. ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಅದರಲ್ಲು ಬೇರೆ ಕಾಯಿಲೆ ಇರುವವರಿಗೆ ಕೊರೊನಾ‌ ಸೋಂಕು ತಗುಲಿ ಸಾವನಪ್ಪುತ್ತಿದ್ದಾರೆ. ಪ್ರವಾಸಿ ತಾಣಗಳನ್ನು ಮುಚ್ಚುವ ಪ್ರಸ್ತಾಪವನ್ನು ನಾವು ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿಲ್ಲ. ಪ್ರವಾಸಿತಾಣಗಳಿಂದಲೆ ಕೊರೊನಾ‌ ಹೆಚ್ಚಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.

ನಗರದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಂಡು ಉಚಿತವಾಗಿ ಲಸಿಕೆ ನೀಡುವ ಪ್ರಯತ್ನ ನಡೆಯುತ್ತಿದೆ. ಒಂದು ತಿಂಗಳಲ್ಲಿ ನಾವು ಎಲ್ಲರಿಗೂ ಲಸಿಕೆ ನೀಡಲಾಗುತ್ತೆ. ತಾಲೂಕು ಮಟ್ಟದಲ್ಲಿ ಉಪಕೇಂದ್ರಗಳಲ್ಲಿ ವೈದ್ಯರು ಕೊರತೆ ಇದೆ. ಹಿಂದೆ ಲಸಿಕೆ ಕೊರತೆ ಇತ್ತು. ವಾರದ ಎಲ್ಲಾ ದಿನಗಳಲ್ಲಿ ಲಸಿಕೆ ನೀಡಲು ಕೇಂದ್ರ ಸರ್ಕಾರದ ಅದೇಶ ಬಂದಿದೆ. ಇಡೀ ತಿಂಗಳ‌ ಎಲ್ಲಾ ದಿನ ಲಸಿಕೆ ನೀಡಲಾಗುತ್ತೆ ಎಂದು ಡಿಸಿ ರೋಹಿಣಿ ಸಿಂಧೂರಿ ತಿಳಿಸಿದರು.

ಮೈಸೂರಿನಲ್ಲಿ  ತಾಲೂಕಿನಲ್ಲಿ 13 ಉಪಕೇಂದ್ರಗಳಲ್ಲಿ ಲಸಿಕೆ ನೀಡುತ್ತಿದ್ದೇವೆ. ಕೊರೋನಾ ಪ್ರಮಾಣ ಹೆಚ್ಚಾಗುತ್ತಿದೆ. ಎಲ್ಲಾ ಜಾತ್ರೆಗಳನ್ನು ನಾವು ರದ್ದು ಮಾಡಿದ್ದೇವೆ. ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಾವು ರಾಜ್ಯದಲ್ಲಿ ಪಾಸಿಟಿವ್  ರೇಟ್ ನಲ್ಲಿ ಮೊದಲ ಸ್ಥಾನದಲ್ಲಿ ಇದ್ದೇವೆ. ನಾವು  ವ್ಯಾಕ್ಸಿನ್ ತೆಗೆದುಕೊಂಡರೆ ಕೊರೊನಾ ತಗುಲಿದರೂ ಅದು ಪರಿಣಾಮಕಾರಿ ಆಗಿ ಇರುವುದಿಲ್ಲ.ಹಾಗಾಗಿ ಎಲ್ಲರೂ ವ್ಯಾಕ್ಸಿನ್ ತೆಗೆದುಕೊಳ್ಳಿ ಎಂದರು.

ಇಂದು ಮಧ್ಯಾಹ್ನ ವೇಳೆಗೆ 170 ಕೇಸ್ ಗಳು ದಾಖಲಾಗಿವೆ. . ಅದರಲ್ಲಿ 144 ಕೇಸ್ ಗಳು ಮೈಸೂರು‌ ನಗರದಲ್ಲೆ ಬಂದಿವೆ. ಜನರ ಓಡಾಟ ಹೆಚ್ಚಾಗಿರುವುದರಿಂದ ಕೇಸ್ ಗಳು ಹೆಚ್ಚಾಗುತ್ತಿದೆ. ಪಾಸಿಟಿವ್ ಆಗಿದ್ದ ಸಂಪರ್ಕಿತರು ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸ್ಯಾಕೆಂಡರಿ ಕಾಂಟ್ಯಾಕ್ಟ್ ಇರುವವರು ಕೇವಲ ಶೇ 20  ರಷ್ಟು ಜನ ಮಾತ್ರ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ಉಳಿದವರು ಹಿಂದೇಟು ಹಾಕುತ್ತಿದ್ದಾರೆ ಇದು ಅಪಾಯಕಾರಿ. ಇವರು ಕೂಡ ಸೂಪರ್ ಸ್ಪ್ರೆಡರ್ ಆಗಬಹುದು.Kovid case- crossing- 170 borders – Mysore- today-Mysore- DC Rohini Sindhuri.

ವ್ಯಾಕ್ಸಿನ್ ಎರಡು ಡೋಸೆಜ್ ತೆಗೆದುಕೊಂಡವರಿಗು ಪಾಸಿಟಿವ್ ಬರಬಹುದು. ಪಾಸಿಟಿವ್ ಬಂದರೆ ಅಂತವರಿಗೆ ಯಾವುದೇ ತೊಂದರೆಯಾಗಲ್ಲ. ಎರಡು ಡೋಸೆಜ್ ತೆಗೆದುಕೊಂಡು 15 ದಿನದ ನಂತರ ಪಾಸಿಟಿವ್ ಬಂದ ಉದಾಹರಣೆ ಇಲ್ಲ. ಈ ಬಗ್ಗೆ ಯಾರಿಗೂ ಗೊಂದಲ ಬೇಡ. ಡೋಸೆಜ್ ತೆಗೆದುಕೊಂಡ ನಂತರ ಪಾಸಿಟಿವ್ ಬಂದವರು ಆಸ್ಪತ್ರೆಗೆ ಹೋಗುವಂತ ಸಮಸ್ಯೆ ಉಂಟಾಗಿಲ್ಲ ಎಂದರು.

Key words: Kovid case- crossing- 170 borders – Mysore- today-Mysore- DC Rohini Sindhuri.