ಅಭಿಮಾನಿಗಳನ್ನು ಸೆಳೆದ ಕೋಟಿಗೊಬ್ಬ 3 ಟ್ರೇಲರ್’ನ ಖಡಕ್ ದೃಶ್ಯಗಳು

Promotion

ಬೆಂಗಳೂರು, ಸೆಪ್ಟೆಂಬರ್ 08, 2021 (www.justkannada.in): ನೆನ್ನೆಯಷ್ಟೇ ಬಿಡುಗಡೆಯಾದ ಕೋಟಿಗೊಬ್ಬ 3 ಚಿತ್ರದಲ್ಲಿ ಸುದೀಪ್‌ರ ಕೆಲವು ಖಡಕ್ ಆಕ್ಷನ್ ದೃಶ್ಯಗಳು ಅಭಿಮಾನಿಗಳನ್ನು ಸೆಳೆದಿವೆ.

‘ಜಾಯ್‌ಫುಲ್’ ಆಗಿರುವ ಟ್ರೇಲರ್ ನಿಂದ ಒಂದು ವಿಷಯ ಖಚಿತವಾಗಿದೆ. ‘ಕೋಟಿಗೊಬ್ಬ 3’ ಹಾಸ್ಯ ಪ್ರಧಾನವಾಗಿರುವ ಸಿನಿಮಾ ಅಲ್ಲ. ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಎಂಬುದು ಅಭಿಮಾನಿಗಳಿಗೆ ಮನದಟ್ಟಾಗಿದೆ.

ಐಶಾರಾಮಿ ಕಾರುಗಳು, ಬಾಲಿವುಡ್ ನಟ-ನಟಿಯರು, ವಿದೇಶಿ ನೆಲದಲ್ಲಿ ನಡೆವ ಕಾರ್ ಚೇಸ್‌ಗಳು, ಸಿನಿಮಾಕ್ಕೆ ದೊಡ್ಡ ಮಟ್ಟದಲ್ಲಿಯೇ ಬಂಡವಾಳ ಹಾಕಿರುವುದನ್ನು ತೋರಿಸಿದೆ.

ವಿಲನ್ ನವಾಬ್ ಶಾ, ಅಫ್ತಾದ್ ಶಿವದಾಸನಿ, ರವಿಶಂಕರ್, ತಬಲಾ ನಾಣಿ, ರಂಗಾಯಣ ರಘು ಇನ್ನೂ ಕೆಲವು ನಟರ ದೃಶ್ಯಗಳು ಟ್ರೇಲರ್‌ನಲ್ಲಿವೆ.