ಯೂಟ್ಯೂಬ್’ನಿಂದ ಕೋಟಿಗೊಬ್ಬ-3 ಟೀಸರ್ ಡಿಲೀಟ್ !

Promotion

ಬೆಂಗಳೂರು, ಮಾರ್ಚ್ 09, 2020 (www.justkannada.in): ಕೋಟಿಗೊಬ್ಬ-3 ಚಿತ್ರದ ಟೀಸರ್ ಯೂಟ್ಯೂಬ್ ನಿಂದ ಡಿಲೀಟ್ ಮಾಡಲಾಗಿದೆ.

ದಿಢೀರನೆ ಚಿತ್ರದ ಟೀಸರ್ ಡಿಲೀಟ್ ಆಗಿರುವುದು ನೋಡಿ ಚಿತ್ರತಂಡ ಮತ್ತು ಅಭಿಮಾನಿಗಳು ಶಾಕ್ ಆಗಿದ್ದಾರೆ. ಚಿತ್ರದ ಟೀಸರ್ ದಿಢೀರ್ ಕಣ್ಮರೆಯಾಗಲು ಕಾರಣ ವೈಬ್ರೆಂಟ್ ಲಿಮಿಟೆಡ್ ಕಂಪನಿ ಮಾಲೀಕ ಮುಂಬೈವಾಲ ಅಜಯ್ ಪಾಲ್ ಎಂದು ಹೇಳಲಾಗುತ್ತಿದೆ.

ಚಿತ್ರತಂಡ ಬಾಕಿ ಹಣಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಅಜಯ್ ಪಾಲ್ ಟೀಸರ್ ಡಿಲೀಟ್ ಮಾಡಿಸಿದ್ದಾರಂತೆ. ಪೋಲೆಂಡ್ ನಲ್ಲಿ ಚಿತ್ರೀಕರಿಸಲಾದ ದೃಶ್ಯಗಳು ಅಜಯ್ ಪಾಲ್ ಮತ್ತು ಸಂಜಯ್ ಪಾಲ್ ಕಂಪೆನಿ ಹೆಸರಿನಲ್ಲಿದೆ.

ಬಾಕಿ ನೀಡದೆ ಟೀಸರ್ ರಿಲೀಸ್ ಮಾಡಲಾಗಿದೆ ಎನ್ನುವ ಕಾರಣಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿದ್ದ ಟೀಸರ್ ಅನ್ನು ಡಿಲೀಟ್ ಮಾಡಿಸಲಾಗಿದೆ ಎಂದು ಹೇಳಲಾಗುತ್ತಿದೆ.