ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳು ಸ್ಥಳದಲ್ಲೇ ದುರ್ಮರಣ…

Promotion

ಕೊಪ್ಪಳ,ಆ,28,2019(www.justkannada.in): ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳು ಸ್ಥಳದಲ್ಲೇ ಸಾವನಪ್ಪಿರುವ ದಾರುಣ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

 ಕೊಪ್ಪಳ ಜಿಲ್ಲೆಯ ಕನಕಗಿರಿಯ ನವಲಿ ಗ್ರಾಮದಲ್ಲಿ  ಈ ದುರ್ಘಟನೆ ಸಂಭವಿಸಿದೆ. 7 ವರ್ಷದ ಸೋನು, 4 ವರ್ಷದ ಸವಿತಾ,  ಎರಡು ವರ್ಷದ ಕವಿತಾ ಮೃತಪಟ್ಟ ಮಕ್ಕಳು ಎಂದು ಗುರುತಿಸಲಾಗಿದೆ.  ಮೃತ ಮಕ್ಕಳ ಪೋಷಕರು ಮಹಾರಾಷ್ಟ್ರದ ಪುಣೆ ಮೂಲದವರು ಎನ್ನಲಾಗಿದ್ದು ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಬಂದಿದ್ದರು.

ಈ ನಡುವೆ ಮಕ್ಕಳು ಆಟವಾಡಲು ತೆರಳಿದ್ದ ವೇಳೆ ಮರಳಿನ ದಿಬ್ಬ ಕುಸಿದು ಸಾವನ್ನಪ್ಪಿದ್ದಾರೆ.  ಘಟನಾ ಸ್ಥಳಕ್ಕೆ ಕನಕಗಿರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: koppal-Three children –die- on the spot – sand dune- collapsed.