ನಿರ್ಬಂಧವಿದ್ದರೂ ಅಂಜನಾದ್ರಿ ಬೆಟ್ಟಕ್ಕೆ ಭೇಟಿ: ದೇವರ ದರ್ಶನ ಪಡೆದ ಸಚಿವ ಸಿ.ಪಿ ಯೋಗೇಶ್ವರ್.

Promotion

ಕೊಪ್ಪಳ,ಜೂನ್,30,2021(www.justkannada.in):  ರಾಜ್ಯದಲ್ಲಿ ಕೊರೋನಾ ಹಿನ್ನೆಲೆ ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶವನ್ನ ನಿರ್ಬಂಧಿಸಲಾಗಿದ್ದು, ನಿಷೇಧವಿದ್ದರೂ ಸಹ  ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.jk

ಇಂದು ಬೆಳಗ್ಗೆ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್  ಅಂಜನಾದ್ರಿ ಬೆಟ್ಟಕ್ಕೆ  ಭೇಟಿ ನೀಡಿ ಆಂಜನೇಯ ದೇವರ ದರ್ಶನ ಪಡೆದರು. ಈ ವೇಳೆ ಸ್ಥಳೀಯ ಮುಖಂಡರು ಸಾಥ್ ನೀಡಿದರು. ಇನ್ನು ಕೊರೋನಾ 2ನೇ ಅಲೆ ಹಿನ್ನೆಲೆ ರಾಜ್ಯದ ದೇವಾಲಯಗಳಿಗೆ ಸಾರ್ವಜನಿಕರ ನಿಷೇಧ ವಿಧಿಸಲಾಗಿದೆ. ಇದೀಗ ಸಚಿವ ಸಿ.ಪಿ ಯೋಗೇಶ್ವರ್ ಕೋವಿಡ್ ನಿಯಮ ಉಲ್ಲಂಘಿಸಿರುವುದು ಚರ್ಚೆಯಾಗುತ್ತಿದೆ.

ಸಚಿವ ಸಿಪಿ ಯೋಗೇಶ್ವರ್ ಉತ್ತರ ಕರ್ನಾಟಕದ ಪ್ರವಾಸ ಹಮ್ಮಿಕೊಂಡಿದ್ದಾರೆ. ನಿನ್ನೆ ಕಲ್ಬುರ್ಗಿ ಮತ್ತು ವಿಜಯಪುರಕ್ಕೆ ಭೇಟಿ ನೀಡಿದ್ದರು.

Key words: koppal- Anjanadri Hill -minister – CP Yogeshwar-worship- God