ಕೊರೋನಾ ವೈರಸ್ ಭೀತಿ ಹಿನ್ನೆಲೆ: 9 ಸಾವಿರ ಕೋಳಿಗಳ ಮಾರಣಹೋಮ…

Promotion

ಕೋಲಾರ,ಮಾ,10,2020(www.justkannada.in): ಕೊರೋನಾ ವೈರಸ್ ಭೀತಿ ಹಿನ್ನೆಲೆ ಸುಮಾರು 9 ಸಾವಿರ ಕೋಳಿಗಳನ್ನ ಮಾಲೀಕ ನಾಶ  ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೋಳಿಫಾರಂ ಮಾಲೀಕ ಹೇಮಂತರೆಡ್ಡಿ ಎಂಬುವವರು ತಮ್ಮ ಫಾರಂನಲ್ಲಿದ್ದ ಸುಮಾರು 9500 ಕೋಳಿಗಳನ್ನ ಮಾರಣಹೋಮ ಮಾಡಿದ್ದಾರೆ. ಕೋಳಿಗಳಿಂದ ಮಾರಣಾಂತಿಕ ಕೊರೋನಾ ವೈರಸ್​ ಹರಡುತ್ತಿದೆ ಎಂಬ ವದಂತಿ ಹಬ್ಬಿತ್ತು.

ಹೀಗಾಗಿ ಕೋಳಿ ಮಾಂಸದ ಮಾರಾಟದಲ್ಲಿ ಭಾರೀ ಕುಸಿತ ಉಂಟಾಗಿದ್ದು, ಬೆಲೆಯೂ ಇಳಿಕೆ ಕಂಡಿದೆ. ಹೀಗಾಗಿ ಕೋಳಿಗಳು ಮಾರಾಟವಾದರೂ ಬೆಲೆ ಇಲ್ಲದೆ ನಷ್ಟ ಉಂಟಾಗುವುದು ಖಚಿತವಾಗಿದ್ದು, ಮಾಗೊಂದಿ ಗ್ರಾಮದ ಹೇಮಂತ್ ಎನ್ನುವವರು ತಮ್ಮ ಕೋಳಿ ಫಾರಂನಲ್ಲಿರುವ  ಕೋಳಿಗಳನ್ನ ನಾಶ ಮಾಡಿದ್ದಾರೆ.

Key words: kolar-coronavirus- horror- 9 thousand- chickens- Destroyed