ಕೆಎಲ್ ರಾಹುಲ್ ಚಾಂಪಿಯನ್ ಆಟಗಾರ ಎಂದಿದ್ದೇಕೆ ಕೊಹ್ಲಿ!

Promotion

ಬೆಂಗಳೂರು, ಮಾರ್ಚ್ 17, 2021 (www.justkannada.in): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಬೆಂಬಲಕ್ಕೆ ನಿಲ್ಲುವುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಮೂರು ಪಂದ್ಯಗಳಲ್ಲಿ ಎರಡು ಬಾರಿ ಶೂನ್ಯ ಸಂಪಾದಿಸಿರುವ ಕೆಎಲ್ ರಾಹುಲ್ ಒಂದು ಬಾರಿ ಒಂದು ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾದಲ್ಲಿ ರಾಹುಲ್ ಸ್ಥಾನದ ಕುರಿತು ಮಾತುಗಳು ಕೇಳಿಬಂದಿದ್ದವು.

ಈ ಸಂಬಂಧ ಪ್ರತಿಕ್ರಿಯಿಸಿರುವ ಕೊಹ್ಲಿ,  ಕೆಎಲ್ ರಾಹುಲ್ ಓರ್ವ ಚಾಂಪಿಯನ್ ಆಟಗಾರ.  ರೋಹಿತ್ ಶರ್ಮಾ ಜೊತೆಗೆ ಆತ ಮುಂದುವರಿಯುತ್ತಾರೆ ಎಂದು ತಿಳಿಸಿದ್ದಾರೆ.

ಕೆಎಲ್ ರಾಹುಲ್ ಅವರಂತಾ ಆಟಗಾರ ಫಾರ್ಮ್‌ ಗೆ ಮರಳುವುದು ಕೇವಲ 5 ರಿಂದ 6 ಎಸೆತಗಳ ವಿಚಾರವಷ್ಟೆ ಎಂದಿರುವ ಕೊಹ್ಲಿ ರಾಹುಲ್ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.