ಇಂದು ವಿಂಡೀಸ್ ವಿರುದ್ಧ ಗೆದ್ದು ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೆಷನ್’ಗೆ ಕೊಯ್ಲಿ ರೆಡಿ !

Promotion

ಮುಂಬೈ, ಡಿಸೆಂಬರ್ 11, 2019 (www.justkannada.in): ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಾಂಪತ್ಯಕ್ಕೆ ಕಾಲಿರಿಸಿ 2 ಎರಡು ವರ್ಷ ಪೂರೈಸಿದೆ.

2017, ಡಿಸೆಂಬರ್ 11ರಂದು ಕೊಹ್ಲಿ ಮತ್ತು ಅನುಷ್ಕಾ ಇಟಲಿಯಲ್ಲಿ ವಿಶೇಷವಾಗಿ ಮದುವೆ ಮಾಡಿಕೊಂಡಿದ್ದರು. ಬುಧವಾರ ಅಂದರೆ ಡಿ.11ರಂದು ಎರಡನೇ ವರ್ಷ ಪೂರೈಸಿದರು.

ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯ ನಡೆಯಲಿದ್ದು, ದಂಪತಿಗಳಿಗೆ ಸರಣಿ ಗೆಲುವಿನ ಉಡುಗೊರೆ ದೊರೆಯುವುದೇ ಎಂಬ ಕುತೂಹಲ ಮೂಡಿಸಿದೆ.