ಮಹಿಳಾ ಕ್ರಿಕೆಟರ್ ತಾಯಿ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ ಕೊಯ್ಲಿ

Promotion

ಬೆಂಗಳೂರು, ಮೇ 20, 2021 (www.justkannada.in): ಮಾಜಿ ಮಹಿಳಾ ಕ್ರಿಕೆಟರ್ ತಾಯಿ ಜೀವ ಉಳಿಸಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ನೆರವಾಗಿದ್ದಾರೆ.

ಮಾಜಿ ಕ್ರಿಕೆಟರ್ ಕೆ.ಎಸ್. ಶ್ರಾವಂತಿ ನಾಯ್ಡು ಅವರ ತಾಯಿ ಚಿಕಿತ್ಸೆಗೆ ಕೊಯ್ಲಿ ಹಣ ಸಹಾಯ ಮಾಡಿದ್ದಾರೆ.

ಶ್ರಾವಂತಿ ತಾಯಿ ಎಸ್.ಕೆ. ಸುಮನ್ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಆದರೆ ಚಿಕಿತ್ಸೆಗೆ ಹಣದ ಕೊರತೆ ಎದುರಿಸುತ್ತಿದ್ದ ಅವರ ನೆರವಿಗೆ ಕೊಯ್ಲಿ ಆಗಮಿಸಿದ್ದಾರೆ,

ತಾಯಿಯ ಚಿಕಿತ್ಸೆಗೆ ಸಹಾಯ ಮಾಡುವಂತೆ ಬಿಸಿಸಿಐ ಮತ್ತು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ​​ಸಹಾಯವನ್ನು ಕೋರಿದರು. ವಿಷಯ ತಿಳಿದ ಕೊಹ್ಲಿ ಆರ್ಥಿಕ ನೆರವು ನೀಡಿದ್ದಾರೆ.