‘ವಿರಾಟ’ ಗಳಿಕೆಗೆ ಲಾಕ್ ಡೌನ್ ಅಡ್ಡ ಬರ್ಲೇ ಇಲ್ಲ ! ಇನ್‍ಸ್ಟಾಗ್ರಾಮ್‍ನಿಂದ 3.6 ಕೋಟಿ ಕೋಟಿ ಗಳಿಸಿದ ಕೊಯ್ಲಿ

Promotion

ದುಬೈ, ಜೂನ್ 08, 2020 (www.justkannada.in): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇನ್‍ಸ್ಟಾಗ್ರಾಮ್‍ನಿಂದ ಕೋಟಿ ಕೋಟಿ ಹಣ ಗಳಿಸಿದ್ದಾರೆ.
ಲಾಕ್‍ಡೌನ್ ಕೆಲವು ಆಟಗಾರರ ಮೇಲೆ ಯಾವುದೇ ಆರ್ಥಿಕ ಪರಿಣಾಮ ಬೀರಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಪೋರ್ಚುಗಲ್‍ನ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಇನ್‍ಸ್ಟಾಗ್ರಾಮ್‍ನಿಂದ ಸುಮಾರು 18 ಕೋಟಿ ರೂ. ಗಳಿಸಿದ್ದಾರೆ.
ಈ ಮೂಲಕ ಇನ್‍ಸ್ಟಾದಿಂದ ಹೆಚ್ಚು ಹಣಗಳಿಸಿದವರ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆರನೇ ಸ್ಥಾನದಲ್ಲಿದ್ದು, ಅವರು ಮೂರು ಪ್ರಾಯೋಜಿತ ಪೋಸ್ಟ್ ಗಳಿಂದ ಒಟ್ಟು 3.6 ಕೋಟಿ ರೂ. ಗಳಿಸಿದ್ದಾರೆ. ಅಂದಹಾಗೆ ವಿರಾಟ್ ಇನ್‍ಸ್ಟಾಗ್ರಾಮ್‍ನಲ್ಲಿ 6.2 ಕೋಟಿ ಫಾಲೋವರ್ಸ್ ಹೊಂದಿದ್ದಾರೆ.