ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ನೌಕರರ ದಾರಿತಪ್ಪಿಸುತ್ತಿದ್ದಾರೆ : ಸಿಎಂ ಹಾಗೂ ಸಚಿವರುಗಳಿಂದ ಕಿಡಿ

Promotion

ಬೆಂಗಳೂರು,ಡಿಸೆಂಬರ್,14,2020(www.justkannada.in) :  ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ನೌಕರರ ದಾರಿತಪ್ಪಿಸುತ್ತಿದ್ದಾರೆಂದು ಸಿಎಂ ಆದಿಯಾಗಿ ಸಚಿವರುಗಳು ಕಿಡಿಕಾರಿದ್ದಾರೆ.logo-justkannada-mysoreಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಸಿಎಂ ಬಿಎಸ್ ವೈ ಗರಂ ಆಗಿದ್ದು, ಟ್ವೀಟ್ ಮೂಲಕ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್, ಗೃಹಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕಿಡಿ ಕಾರಿದ್ದಾರೆ.

ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿದ್ದ  ಸರ್ಕಾರ

ಸರಕಾರಿ ನೌಕರರೆಂದು ಪರಿಗಣಿಸಿ ಎಂಬ ಬೇಡಿಕೆ ಹೊರತುಪಡಿಸಿ ಉಳಿದೆಲ್ಲಾ ಬೇಡಿಕೆಗಳಿಗೂ ಅಸ್ತು ಎಂದಿದ್ದ ಸರ್ಕಾರ. ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರೂ ಮತ್ತೆ ಪ್ರತಿಭಟನೆ ನಿರ್ಧಾರಕ್ಕೆ ಆಕ್ರೋಶವ್ಯಕ್ತಪಡಿಸಿದ್ದಾರೆ.

Kodihalli-Chandrasekhar-Transport-Workers-Misleading-Ministers-sparkಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ರೈತ ನಾಯಕರು ಎನಿಸಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಸಾರಿಗೆ ವ್ಯವಸ್ಥೆ ಹಾಗೂ ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಅರಿವಿದೆಯೇ? ಎಂದು ಪ್ರಶ್ನಿಸಿದ್ದಾರೆ.

ತಮಗೆ  ಅರಿವಿಲ್ಲದ ವಿಷಯಗಳ ಬಗ್ಗೆ ಮೂಗು ತೂರಿಸುವುದು ಎಷ್ಟು ಸಮಂಜಸ ಎಂದು ಜನ ಕೇಳುತ್ತಿರುವ ಪ್ರಶ್ನೆಗೆ ಕೋಡಿಹಳ್ಳಿ ಚಂದ್ರಶೇಖರ್ ಅವರು ಮೊದಲು ಉತ್ತರ ನೀಡಬೇಕು ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಡಿಸಿಎಂ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಸಾರಿಗೆ ನೌಕರರು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು. ಅವರನ್ನು ದಿಕ್ಕು ತಪ್ಪಿಸುತ್ತಿರುವ ನಕಲಿ ನಾಯಕರಿಗೆ ತಕ್ಕ ಶಾಸ್ತಿ ಕಾದಿದೆ ಎಂದಿದ್ದಾರೆ.

Kodihalli-Chandrasekhar-Transport-Workers-Misleading-Ministers-spark

ಮುಷ್ಕರ ಮುದುವರಿಸುವುದು ಸರ್ವಥಾ ಸರಿಯಲ್ಲ. ಮುಖ್ಯಮಂತ್ರಿ ಮುಂದೆಯೇ ಮುಷ್ಕರ ವಾಪಸ್ ಪಡೆಯುವುದಾಗಿ ಒಪ್ಪಿಕೊಂಡು ಹೋದ ಮುಖಂಡರು ಸ್ವಲ್ಪ ಹೊತ್ತಿನಲ್ಲೇ ವರಸೆ ಬದಲಿಸಿದ್ದು, ಯಾಕೆ? ಅವರ ಹಿಂದೆ ಯಾರಿದ್ದಾರೆ? ಎಂದು ಟ್ವೀಟ್ ಮೂಲಕ ಆಕ್ರೋಶವ್ಯಕ್ತಪಡಿಸಿದ್ದಾರೆ.

Kodihalli-Chandrasekhar-Transport-Workers-Misleading-Ministers-spark

English summary…

Kodihalli Chandrashekar is misguiding transport department employees: CM and Ministers ire
Bengaluru, Dec. 14, 2020 (www.justkannada.in): The Chief Minister B.S. Yeddyurappa and several Ministers have expressed their ire upon farmer leader Kodihalli Chandrashekar alleging him of misguiding the transport department employees.Kodihalli-Chandrasekhar-Transport-Workers-Misleading-Ministers-spark
Along with CM B.S. Yeddyurappa, several other Ministers including, Deputy CM Dr. Ashwathnarayan, Home Minister Basavaraj Bommai, Health Minister Dr. K. Sudhakar, have tweeted against the farmer leader, expressing their dissatisfaction.
The government had agreed to almost all the demands of the employees, except their demand to consider them as government employees. The Ministers have expressed their anger because of continuing the protest despite agreeing to their demands.
Keywords: Transport department protest/ Kodihalli Chandrashekar/ B.S. Yedyurappa/ Ministers

key words : Kodihalli-Chandrasekhar-Transport-Workers-
Misleading-Ministers-spark