ಗಜರಾಜನ ಪುಂಡಾಟಕ್ಕೆ ಶಾಲೆಯ ಪಿಲ್ಲರ್ ಪುಡಿಪುಡಿ….

Promotion

ಕೊಡಗು,ಜು,11,2020(www.justkannada.in):  ಕೊಡಗು ಜಿಲ್ಲೆಯ  ಕಕ್ಕಬ್ಬೆ ನಾಲಡಿಯಲ್ಲಿ ಕಾಡಾನೆ ಪುಂಡಾಟ ನಡೆಸಿ ಶಾಲೆಯ ಪಿಲ್ಲರ್ ಪುಡಿಗಟ್ಟಿರುವ ಘಟನೆ ನಡೆದಿದೆ.jk-logo-justkannada-logo

ಕೊಡಗು ಜಿಲ್ಲೆಯ ನಾಲ್ಕುನಾಡು ವ್ಯಾಪ್ತಿಯಲ್ಲಿ ಆನೆಹಿಂಡಿನ ಉಪಟಳ ಹೆಚ್ಚಾಗಿದ್ದು, ಈ ನಡುವೆ  ನಾಲ್ಕುನಾಡಿ ಅರಮನೆ ಬಳಿಯ ಶಾಲೆಯೊಂದರಲ್ಲಿ ನಿನ್ನೆ ರಾತ್ರಿ ಗಜರಾಜ ಪುಂಡಾಟ ತೋರಿ ಶಾಲೆಯ ಪಿಲ್ಲರ್ ಪುಡಿಗಟ್ಟಿದ್ದಾನೆ. ಈ ವೇಳೆ ಅಂಗಡಿ ರಾಜು ಎಂಬುವವರ ವ್ಯಾನ್ ಮತ್ತು ರಾಜನ್ ಎಂಬವರ ಮನೆ ಛಾವಣಿಗೂ ಹಾನಿ ಉಂಟಾಗಿದೆ.kodagu-elephant-school-attack

ಮೊನ್ನೆಯಷ್ಟೆ ಕಾಡಾನೆ  ಬೇಲಿಯ ತಂತಿ ಕಿತ್ತು ಬಿಸಾಡಿತ್ತು, ಈ ನಡುವೆ ನಾಲ್ಕುನಾಡು, ವ್ಯಾಪ್ತಿಯಲ್ಲಿ ಆನೆ ಹಿಂಡಿನ ಉಪಟಳ ಹೆಚ್ಚಾಗಿದ್ದು ಭಾಗಮಂಡಲದಲ್ಲಿರುವ ಅರಣ್ಯ ವಲಯ ಕಚೇರಿಯನ್ನ ಕಕ್ಕಬ್ಬೆಗೆ ಸ್ಥಳಾಂತರಿಸುವಂತೆ ಸ್ಥಳೀಯರಾದ ಪಾಂಡಂಡ ನರೇಶ್ ಆಗ್ರಹಿಸಿದ್ದಾರೆ.

Key words: kodagu-elephant-school-attack