ಮೊಟ್ಟೆ ಎಸೆತ ಹೇಡಿಗಳ ಕೃತ್ಯ: ಸರ್ಕಾರದ ವೈಪಲ್ಯ ಮುಚ್ಚಿಕೊಳ್ಳಲು ಗಲಭೆ ಸೃಷ್ಠಿ- ಬಿಜೆಪಿ ವಿರುದ್ಧ ಸಿದ‍್ಧರಾಮಯ್ಯ ಕೆಂಡಾಮಂಡಲ.

Promotion

ಕೊಡಗು,ಆಗಸ್ಟ್,18,2022(www.justkannada.in):  ಕೊಡಗಿನಲ್ಲಿ  ನೆರೆ ಹಾನಿ ವೀಕ್ಷಣೆಗೆ ತೆರಳಿದ್ಧ ವೇಳೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಎಸೆದ ಘಟನೆಯನ್ನ ವಿಪಕ್ಷ ನಾಯಕ ಸಿದ‍್ಧರಾಮಯ್ಯ ಖಂಡಿಸಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸಿಎಂ ಸಿದ‍್ಧರಾಮಯ್ಯ, ಮೊಟ್ಟೆ ಎಸೆತ ಹೇಡಿಗಳ ಕೃತ್ಯ. ಹತಾಶರಾಗಿ ಈ ರೀತಿ ಮಾಡುತ್ತಿದ್ದಾರೆ. ಹಣ ಕೊಟ್ಟು ಕಾರ್ಯಕರ್ತರನ್ನ ಕರೆ ತಂದಿದ್ದಾರೆ.  ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಾಗಿದೆ. ಬಿಜೆಪಿಯವರಿಗೆ ಸರ್ಕಾರ ನಡೆಸಲು ಬರುವುದಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಕಾರ್ಯಕರ್ತರಿಗೂ ಪ್ರತಿಭಟಿಸುವ ಶಕ್ತಿ ಇದೆ. ಸರ್ಕಾರದ ವೈಪಲ್ಯ ಮುಚ್ಚಿಕೊಳ್ಳಲು ಗಲಭೆ ಸೃಷ್ಠಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Key words: kodagu-bjp-protest-  former CM-Siddaramaiah