ಕ್ಷುಲ್ಲಕ ಕಾರಣ ಸ್ನೇಹಿತನಿಂದಲೇ ಕುತ್ತಿಗೆಗೆ ಚಾಕು ಇರಿತ

Promotion

ಮೈಸೂರು,ನವೆಂಬರ್,04,2020(www.justkannada.in) : ನಂಜನಗೂಡು ತಾಲೂಕಿನ ತಾಂಡವಪುರ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಸ್ನೇಹಿತನಿಗೆ ಚಾಕು ಇರಿದಿರುವ ಘಟನೆ ನಡೆದಿದೆ.jk-logo-justkannada-logo

ರೋಹನ್ ಚಾಕು ಇರಿತಕ್ಕೆ ಒಳಗಾದ ಯುವಕನಾಗಿದ್ದಾನೆ. ಕೊರೊನಾ ಹಿನ್ನೆಲೆ ಇಬ್ಬರೂ ರಜೆಯಲ್ಲಿದ್ದರು. ಲ್ಯಾಪ್ ಟಾಪ್ ನೋಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ಇವರ ನಡುವೆ ಜಗಳ ಶುರುವಾಗಿದೆ. ಅದು ತಾರಕಕ್ಕೆ ಏರಿ ಇದ್ದಕ್ಕಿದ್ದಂತೆ ದಿಲ್ ಶಾದ್, ರೋಹನ್ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ.

 

5ನೇ ತರಗತಿಯಿಂದ ದಿಲ್ ಶಾದ್ ಮತ್ತು ರೋಹನ್ ಸ್ನೇಹಿತರು

5ನೇ ತರಗತಿಯಿಂದ ದಿಲ್ ಶಾದ್ ಮತ್ತು ರೋಹನ್ ಸ್ನೇಹಿತರಾಗಿದ್ದವರು. ಸದ್ಯ ಇಬ್ಬರೂ ಎಂಜಿನಿಯರಿಂಗ್ ಓದುತ್ತಿದ್ದರು. ರೋಹನ್ ಮಂಗಳೂರಿನ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಹಾಗೂ ದಿಲ್ ಶಾದ್ ಮೈಸೂರಿನ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯಾಗಿದ್ದಾರೆ.

knife-neck-friend-trivial-reason

ಘಟನೆ ನಂತರ ನಂಜನಗೂಡು ಪೊಲೀಸರು ದಿಲ್ ಶಾದ್ ನನ್ನು ವಶಕ್ಕೆ ಪಡೆದಿದ್ದು, ರೋಹನ್ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.

key words : knife-neck-friend-trivial-reason