ತೋಟದ ಮನೆಗೆ ನುಗ್ಗಿ ದರೋಡೆಕೋರರಿಂದ ವ್ಯಕ್ತಿಗೆ ಚಾಕು ಇರಿತ: ಹಣ ಮತ್ತು ಮೊಬೈಲ್ ಕಸಿದು ಪರಾರಿ..

Promotion

ಮೈಸೂರು,ನ,21,2019(www.justkannada.in):  ತಡರಾತ್ರಿ ತೋಟದ ಮನೆಗೆ ನುಗ್ಗಿದ 4ಮಂದಿ ಡಕಾಯಿತರು ಕೇರಳ ಮೂಲದ ವ್ಯಕ್ತಿಗೆ ಚಾಕು ಇರಿದು ಹಣ ಮೊಬೈಲ್ ದೋಚಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಕೇರಳ ಮೂಲದ ವರ್ಗೀಸ್ (49)ಹಲ್ಲೆಗೊಳಗಾದ ವ್ಯಕ್ತಿ. ಎಚ್.ಡಿ.ಕೋಟೆ ತಾಲೋಕಿನ ಬೀಚನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂತರಸಂತೆಯಲ್ಲಿ ಘಟನೆ ನಡೆದಿದೆ. ಬುಧವಾರ ತಡರಾತ್ರಿ ಪೆಟ್ರೊಲ್‌ ಕೇಳುವ ನೆಪದಲ್ಲಿ ತೋಟದ ಮನೆ ಪ್ರವೇಶಿಸಿ  ದರೋಡೆಕೋರರು ಹಲ್ಲೆ ನಡೆಸಿದ್ದಾರೆ. ಬಳಿಕ ಮನೆಯಲ್ಲಿರಿಸಿದ್ದ 1ಲಕ್ಷ ಹಣ ಮತ್ತು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.

ಹಲ್ಲೆಗೊಳಗಾದ ಗಾಯಾಳು ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

Key words: Knife -stabbing – gangster- mysore