KSOU ಹಣಕಾಸು ಅಧಿಕಾರಿ ಹುದ್ದೆಯಿಂದ ಖಾದರ್ ಪಾಶಾ ಬಿಡುಗಡೆ.

Promotion

ಮೈಸೂರು,ನವೆಂಬರ್,10,2023(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಹುದ್ದೆಯಿಂದ ಎ. ಖಾದರ್ ಪಾಶಾ ಅವರನ್ನ ಬಿಡುಗಡೆಗೊಳಿಸಲಾಗಿದೆ.

ಏ. ಖಾದರ್ ಪಾಶಾ ಅವರು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದು,  ಕಳೆದ ಎಂಟೂವರೆ ವರ್ಷಗಳಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಹುದ್ದೆಯ ನಿಯೋಜನೆ ಮೇಲಿದ್ದರು.

ಇಂದು ಖಾದರ್ ಪಾಶಾ ಅವರನ್ನು ಕರಾಮುವಿ ಹಣಕಾಸು ಅಧಿಕಾರಿ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಕೆಎಸ್ ಒಯು ಇತಿಹಾಸ ಸಹಾಯಕ ಪ್ರಾಧ್ಯಾಪಕ ಡಾ.ರಮೇಶ್ ಅವರಿಗೆ ಹಣಕಾಸು ಅಧಿಕಾರಿ ಹುದ್ದೆಯ ಕಾರ್ಯಭಾರ ವಹಿಸಲಾಗಿದ್ದು ಅಧಿಕಾರ ಸ್ವೀಕರಿಸಿದ್ದಾರೆ.

3 ಬಾರಿ ವರ್ಗಾವಣೆಯಾಗಿ, ಸ್ಥಳ ನಿಯುಕ್ತಿಯಾಗಿದ್ದರೂ ಸಹ ಹಣಕಾಸು ಅಧಿಕಾರಿ ಹುದ್ದೆಯಿಂದ ಖಾದರ್ ಪಾಶಾ ಅವರು ಬಿಡುಗಡೆಗೊಂಡಿರಲಿಲ್ಲ.

Key words:  Khader Pasha- released – Finance Officer – KSOU.