ಟೀಸರ್ ನಲ್ಲೆ ಕಿಡಿ ಹೊತ್ತಿಸಿದ ಕೆಜಿಎಫ್ ಚಾಪ್ಟರ್ 2 ಚಿತ್ರ: ಹತ್ತು ನಿಮಿಷದಲ್ಲಿ 10 ಲಕ್ಷ ಜನರಿಂದ ವೀಕ್ಷಣೆ …..

Promotion

ಬೆಂಗಳೂರು,ಜನವರಿ,8,2021(www.justkannada.in): ನಟ ರಾಕಿಂಗ್ ಸ್ಟಾರ್  ಯಶ್ ಅಭಿನಯದ ಕೆಜಿಎಫ್-2 ಸಿನಿಮಾ ಟೀಸರ್ ನಲ್ಲಿ ರಾಕಿ ಭಾಯ್ ಯಶ್ ಭರ್ಜರಿ ಎಂಟ್ರಿ ಕೊಟ್ಟಿದ್ದು, ಟೀಸರ್’ಗೆ ಈಗಾಗಲೇ ಭರ್ಜರಿ ರೆಸ್ಪಾನ್ಸ್ ಗಳು ಸಿಗುತ್ತಿದೆ.jk-logo-justkannada-mysore

ಇಂದು ಜನರೆದುರು ಬರಬೇಕಾಗಿದ್ದ ಕೆಜಿಎಫ್ ಚಾಪ್ಟರ್ 2 ಟೀಸರ್  ಹೇಳಿದ್ದಕಿಂತ ಬೇಗನೇ ರಿಲೀಸ್ ಆಗಿದ್ದು, ಹತ್ತು ನಿಮಿಷದಲ್ಲಿ 10 ಲಕ್ಷ ಜನರು ಟೀಸರ್ ವೀಕ್ಷಣೆ ಮಾಡಿದ್ದಾರೆ. ಈ ಮೂಲಕ ಯೂ ಟ್ಯೂಬ್ ನಲ್ಲಿ ರಾಕಿ ಭಾಯ್ ಧೂಳ್ ಎಬ್ಬಿಸುತ್ತಿದ್ದು, ಟೀಸರ್ ನಲ್ಲೆ ಕೆಜಿಎಫ್ ಚಾಪ್ಟರ್ 2 ಚಿತ್ರ ಕಿಡಿ ಹೊತ್ತಿಸಿದೆ.

ಕೆಜಿಎಫ್ ಚಾಪ್ಟರ್ 2 ಟೀಸರ್ ಗೆ  ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಫಿದಾ ಆಗಿದ್ದಾರೆ.  ಜನವರಿ 8(ಇಂದು) ಯಶ್ ಹುಟ್ಟು ಹಬ್ಬದ ಪ್ರಯುಕ್ತ ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆ ಮಾಡುವುದಾಗಿ ಕೆಜಿಎಫ್ ಚಿತ್ರತಂಡ ತಿಳಿಸಿತ್ತು. ಆದರೆ ತಿಳಿಸಿದ ಮುಂಚೆಯೇ  ಟೀಸರ್ ಬಿಡುಗಡೆ ಮಾಡಿದ್ದು ಇದೀಗ ಎಲ್ಲರಿಗೂ ಅಚ್ಚರಿ ತಂದಿದೆ. ಅಷ್ಟೇ ಅಲ್ಲದೆ ಬಿಡುಗಡೆಯಾದ ಕೇವಲ 10 ನಿಮಿಷಗಳ ಅವಧಿಯಲ್ಲಿ  10 ಲಕ್ಷ ಜನ  ವೀಕ್ಷಣೆ ಮಾಡಿದ್ದಾರೆ.kgf-chapter-2-teaser-actor-yash-youtube

ಪ್ರಶಾಂತ್ ನೀಲ್  ಈ ಚಿತ್ರದ ನಿರ್ದೇಶನ ಮಾಡಿದ್ದು,  ಇದರಲ್ಲಿ ಯಾವ ರೀತಿಯ ಕಥೆ ಹಾಗೂ ಚಿತ್ರೀಕರಣ ಬಂದಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಅದಕ್ಕೆ ಉತ್ತರವೆಂಬಂತೆ ಈ ಟೀಸರ್ ರಿಲೀಸ್ ಆಗಿದ್ದು ನೋಡುಗರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ENGLISH SUMMARY….

KGF Chapter 2 teaser gets 10 lakh views
Bengaluru, Jan. 08, 2021 (www.justkannada.in): The teaser of the much-awaited Kannada movie KGF-2, starring Rocking Star Yash, has made a smashing entry. Over 10 lakh viewers have seen the teaser within 10 minutes after its release.kgf-chapter-2-teaser-actor-yash-youtube
The teaser has gone viral on youtube, and fans of Rocking Star have started appreciating the movie.
Keywords: KGF-2/ teaser/ 10 lakh views/ Yash

Key words: KGF Chapter 2 – teaser- actor-yash-youtube