ಮತ್ತೆ ಲಾಕ್ ಡೌನ್: ಕೆಜಿಎಫ್ 2 ಶೂಟಿಂಗ್ ಕೂಡ ಪೋಸ್ಟ್’ಪೋನ್ಡ್!

Promotion

ಬೆಂಗಳೂರು, ಜುಲೈ 14, 2020 (www.justkannada.in): ಇನ್ನು ಒಂದು ತಿಂಗಳ ಕಾಲ ಶೂಟಿಂಗ್​ ಪ್ರಾರಂಭಿಸದಿರಲು ಕೆಜಿಎಫ್​ ಟೀಂ, ನಿರ್ಧರಿಸಿದೆ.

ಕೆಜಿಎಫ್​-2 ಚಿತ್ರದ 20 ದಿನಗಳ ಶೂಟಿಂಗ್​ ಮಾತ್ರ ಬಾಕಿಯಿದೆ. ಲಾಕ್​ಡೌನ್​ ಶುರುವಾದ ದಿನದಿಂದಲೂ ಶೂಟಿಂಗ್​ಗೆ ಬ್ರೇಕ್​ ಬಿದ್ದಿತ್ತು. ಆದರೆ, ಕೆಲ ದಿನಗಳ ಹಿಂದೆಯಷ್ಟೆ ಅರ್ಧಕ್ಕೆ ನಿಂತಿರುವ ಸಿನಿಮಾಗಳ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿತ್ತು.

ಇದೀಗ ಮತ್ತೆ  ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಾಗೂ ಸರ್ಕಾರ ನಗರದಲ್ಲಿ ಒಂದು ವಾರ ಲಾಕ್​ಡೌನ್​ ಘೋಷಿಸಿರೋದು ಚಿತ್ರತಂಡ ಶೂಟಿಂಗ್ ಮುಂದೂಡಲು ನಿರ್ಧರಿಸಿದೆ.

ಅಕ್ಟೋಬರ್​ 23ಕ್ಕೆ ದಸರಾ ಸಂಭ್ರಮದಲ್ಲಿ ಸಿನಿಮಾ ರಿಲೀಸ್​ ಮಾಡೋದಾಗಿ ಘೋಷಿಸಲಾಗಿದೆ. ಆದರೆ ಇದು ಸಾಧ್ಯವಾಗೋದು ಡೌಟು!