ಕಾವೇರಿ: ಬ್ರಿಟಿಷರ ಕಾಲದಿಂದಲೂ ಕರ್ನಾಟಕಕ್ಕೆ ಅನ್ಯಾಯ; ನಟ ಅನಂತ್ ನಾಗ್ ಬೇಸರ

Promotion

ಬೆಂಗಳೂರು, ಸೆಪ್ಟೆಂಬರ್ 21, 2023 (www.justkannada.in): ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಬ್ರಿಟಿಷರ ಕಾಲದಿಂದಲೂ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಇದೆ ಎಂದು ನಟ ಅನಂತ್ ನಾಗ್ ಹೇಳಿದ್ದಾರೆ.
ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯದ ಶಾಸಕರು, ಸಂಸದರು ಒಗ್ಗಟ್ಟಾಗಿ ನಿಂತುಕೊಳ್ಳಬೇಕು ಎಂದು ವಿಡೀಯೋವೊಂದರಲ್ಲಿ ಮಾತನಾಡಿದ ವೇಳೆ ಅನಂತ್ ಆಗ್ರಹಿಸಿದ್ದಾರೆ.
ಕರ್ನಾಟಕ ಸರಿಯಾಗಿ ಕಾವೇರಿ ನೀರು ಬಿಡುತ್ತಿಲ್ಲ ಎನ್ನುವ ಭಾವನೆಯನ್ನು ಅಲ್ಲಿನ ಸರಕಾರದವರು ಅಲ್ಲಿನ ಜನರಿಗೆ ಅವರು ತಂದಿದ್ದಾರೆ. ಇದನ್ನು ಸುಮಾರು 60 ವರ್ಷದಿಂದ ನೋಡಿಕೊಂಡು ಬಂದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬ್ರಿಟಿಷರು ತಮಿಳುನಾಡಿಗೆ ಹೆಚ್ಚು ನೀರು ಸಿಗುವಂತಹ ಅವ್ಯವಸ್ಥೆ ಮಾಡಿದ್ದರು. ಕಳೆದ ಅನೇಕ ವರ್ಷಗಳಲ್ಲಿ ಈ ವಿವಾದ ಹೆಚ್ಚಾಗುತ್ತಲೇ ಬಂದಿದೆ. ಕರ್ನಾಟಕ ಇದೀಗ ಕಠಿಣ ನಿಲುವು ತೆಗದುಕೊಳ್ಳಬೇಕಾಗಿದೆ. ನಮ್ಮ ಎಲ್ಲ ಶಾಸಕರು, ಸಂಸದರು ಒಗ್ಗಟ್ಟಿನಿಂದ ನಿಂತುಕೊಂಡು ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಳೆ ಕಡಿಮೆ ಇದ್ದ ಸಂದರ್ಭದಲ್ಲಿ ಎಂದಿನಂತೆ ತಮಿಳುನಾಡು ಕಾವೇರಿ ವಿವಾದ ಆರಂಭಿಸಿದೆ. ಇದನ್ನು ಸುಮಾರು 60 ವರ್ಷದಿಂದ ನೋಡಿಕೊಂಡು ಬಂದಿದ್ದೇವೆ. ಇದಕ್ಕೆ ಶಾಶ್ವತ ಪರಿಹಾರ ಹುಡುಕಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.