ಕೌನ್​ ಬನೇಗಾ ಕರೋಡ್​ಪತಿಯಲ್ಲಿ ಬಿಗ್ ಬಿ ಗೆ ಬಿಗ್ ಗಿಫ್ಟ್ ಕೊಟ್ಟ ಅಭಿಮಾನಿ !

Promotion

ಬೆಂಗಳೂರು, ನವೆಂಬರ್ 10, 2020 (www.justkannada.in): ಕೌನ್​ ಬನೇಗಾ ಕರೋಡ್​ಪತಿಯಲ್ಲಿ ಬಿಗ್ ಬಿ ಗೆ ಅಭಿಮಾನಿಯೊಬ್ಬರು ಬಿಗ್ ಗಿಫ್ಟ್ ಕೊಟ್ಟಿದ್ದಾರೆ.

ಹೌದು. ಸದ್ಯ ಕೌನ್​ ಬನೇಗಾ ಕರೋಡ್​ಪತಿ ಶೋ ನಡೆಸಿಕೊಡುತ್ತಿರುವ ಅಮಿತಾಬ್​ ಬಚ್ಚನ್​ ತಮ್ಮ ಶೋನಲ್ಲಿ ಅಭಿಮಾನಿಯೊಬ್ಬರ ಪ್ರತಿಭೆಯನ್ನೂ ಪ್ರಶಂಸಿದ್ದಾರೆ.

ಅಮಿತಾಬ್​ ಬಚ್ಚನ್​ರ ಅಭಿಮಾನಿಯೊಬ್ಬರು ಬಿಗ್​ ಬಿ ಮುಖ ಹೊಂದಿರುವ ರಂಗೋಲಿ ಬಿಡಿಸಿ ಅದರ ಮೇಲೆ ಅವರ ಮೊದಲ ಫಿಲಂ ಸಾಥ್​ ಹಿಂದೂಸ್ಥಾನಿ ಎಂಬ ಹೆಸರನ್ನು ಬರೆದಿದ್ದಾರೆ.

ಆ ಸಿನಿಮಾ ರಿಲೀಸ್​ ಆದ ದಿನಾಂಕದಂದೇ ಬಚ್ಚನ್​ಗೆ ಗಿಫ್ಟ್ ಮಾಡಿದ್ದಾರೆ. ಅಂದಹಾಗೆ 1969ರ ನವೆಂಬರ್​​ 7ರಂದು ಅಮಿತಾಬ್​ ಬಚ್ಚನ್​ ನಟನೆಯ ಸಾಥ್​ ಹಿಂದೂಸ್ಥಾನಿ ಸಿನಿಮಾ ರಿಲೀಸ್​ ಆಗಿತ್ತು.