ಪ್ರಧಾನಿ ಮೋದಿ ಜತೆ ಡಿನ್ನರ್ ಮಾಡಬೇಕಂತೆ ನಟಿ ಕತ್ರಿನಾ ಕೈಫ್

Promotion

ಮುಂಬೈ:ಜೂ-3:(www.justkannada.in) ಬಾಲಿವುಡ್ ನಟಿ ಕತ್ರಿನಾ ಕೈಫ್‌ಗೆ ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ಡಿನ್ನರ್ ಮಾಡುವ ಆಸೆಯಂತೆ. ಈ ಬಗ್ಗೆ ಸ್ವತಃ ಕತ್ರಿನಾ, ತಮ್ಮ ಅಭಿಲಾಷೆಯನ್ನು ಮಾಧ್ಯಮಗಳ ಮುಂದೆ ವ್ಯಕ್ತಪಡಿಸಿದ್ದಾರೆ.

ಕತ್ರಿನಾ ಕೈಫ್ ಸದ್ಯ ಸಲ್ಮಾನ್ ಖಾನ್ ಜತೆ ಅಭಿನಯಿಸಿರುವ ‘ಭಾರತ್’ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯೂಸಿಯಾಗಿದ್ದು, ಈ ಸಂದರ್ಭದಲ್ಲಿ ನೀಡಿರುವ ಸಂದರ್ಶನದಲ್ಲಿ ಹಲವಾರು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. “ನಿಮಗೆ ಯಾರೊಂದಿಗೆ ಡಿನ್ನರ್ ಮಾಡಬೇಕೆಂಬ ಆಸೆ ಇದೆ, ಮೂವರ ಹೆಸರು ತಿಳಿಸಿ?” ಎಂಬ ಪ್ರಶ್ನೆಗೆ ಮರ್ಲಿನ್ ಮನ್ರೋ, ನರೇಂದ್ರ ಮೋದಿ ಜಿ, ಕಂಡೋಲಿಜಾ ರೈಸ್” ಎಂಬ ಉತ್ತರವನ್ನು ಕತ್ರಿನಾ ನೀಡಿದ್ದಾರೆ.

ಇದೇ ವೇಳೆ ಅಲ್ಲಿಯೇ ಇದ್ದ ಸಲ್ಮಾನ್ ಖಾನ್, “ಪಟ್ಟಿಯಲ್ಲಿ ಸಲ್ಮಾನ್ ಖಾನ್ ಎಲ್ಲಿದ್ದಾನೆ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕುತ್ತರಿಸಿದ ಕತ್ರಿನಾ, ನಿಜ ಹೇಳಬೇಕೆಂದರೆ ನಾನು ಎಂದೂ ಸಲ್ಮಾನ್ ಜತೆಗೆ ಡಿನ್ನರ್ ಮಾಡಿಲ್ಲ. ಯಾಕೆಂದರೆ ಅವರು ಡಿನ್ನರ್ ಹೊರಗೆ ಮಾಡಲ್ಲ” ಎಂದಿದ್ದಾರೆ.

ಕತ್ರಿನಾರ ಮಾತಿಗೆ ಪ್ರತಿಕ್ರಿಯಿಸಿರುವ ಸಲ್ಮಾನ್, ಕತ್ರಿನಾ ಸಂಜೆ 6.30ಕ್ಕೆ ಡಿನ್ನರ್ ಮಾಡುತ್ತಾರೆ. ಆಗ ನಾನು ಲಂಚ್ ಮಾಡುತ್ತೇನೆ ಎಂದರು. ಅಲ್ಲದೇ ನನ್ನ ಡಿನ್ನರ್‌ನಲ್ಲಿ ನಾನು ಮಾತ್ರ ಇದ್ದರೆ ಸಾಕು. ಸೀರಿಯಸ್ ಆಗಿ ಹೇಳುತ್ತಿದ್ದೇನೆ. ನಾನು ಲಂಚ್, ಡಿನ್ನರ್ ಮನೆಯಲ್ಲಿ ಕುಟುಂಬದ ಜತೆಗೆ ಮಾಡುತ್ತೇನೆ ಎಂದಿದ್ದಾರೆ.

ಪ್ರಧಾನಿ ಮೋದಿ ಜತೆ ಡಿನ್ನರ್ ಮಾಡಬೇಕಂತೆ ನಟಿ ಕತ್ರಿನಾ ಕೈಫ್
Katrina Kaif wants to have dinner with PM Narendra Modi

Katrina Kaif has expressed her desire to have dinner with PM Narendra Modi