ಪುಟ್ಟಣ್ಣ ಕಣಗಾಲ್ ಸಮಕಾಲೀನರಿಗೆ ‘ಕಥಾ ಸಂಗಮ’ ವಿಶೇಷ ಪ್ರದರ್ಶನ

Promotion

ಬೆಂಗಳೂರು, ಡಿಸೆಂಬರ್ 03, 2019 (www.justkannada.in): ಪುಟ್ಟಣ್ಣ ಕಣಗಾಲ್ ಜತೆ ಕೆಲಸ ಮಾಡಿದ ತಂತ್ರಜ್ಞರು, ಕಲಾವಿದರಿಗಾಗಿ ‘ಕಥಾ ಸಂಗಮ’ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.

ಏಳು ನಿರ್ದೇಶಕರು ಏಳು ಕತೆಗಳು ಮತ್ತು ಸಂಗೀತ ನಿರ್ದೇಶಕರು ಒಂದೇ ಸಿನಿಮಾಕ್ಕಾಗಿ ಕೆಲಸ ಮಾಡಿದ ಹೆಮ್ಮೆ ಕಥಾ ಸಂಗಮ ಸಿನಿಮಾದ್ದು. ಈ ಸಿನಿಮಾ ಡಿಸೆಂಬರ್ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಂದಹಾಗೆ ಎಲ್ಲರಿಗೂ ಗೊತ್ತಿರುವ ಹಾಗೆ ಇದು ಪುಟ್ಟಣ್ಣ ಅವರಿಂದ ಸ್ಪೂರ್ತಿ ಪಡೆದು ನಿರ್ಮಾಣವಾದ ಸಿನಿಮಾ.

ಆದರೆ ಅದಕ್ಕೂ ಮೊದಲು ನಿರ್ಮಾಪಕ, ನಟ ರಿಷಬ್ ಶೆಟ್ಟಿ ಸಿನಿಮಾವನ್ನು ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕರು, ನಟರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿದ್ದಾರೆ. ಈ ವಿಶೇಷ ಪ್ರದರ್ಶನಕ್ಕೆ ಹಿರಿಯ ನಟ ಶಿವರಾಂ, ರಾಜೇಶ್, ನಿರ್ದೇಶಕ ಭಗವಾನ್ ಮತ್ತಿತರರು ಪಾಲ್ಗೊಂಡಿದ್ದರು.