ಬಾಂಧವ್ಯ ಬೆಸೆಯುವ ಕಾರ್ಯ: ಮೈಸೂರಿನಲ್ಲಿ ಇಂದಿನಿಂದ ಕಾಶ್ಮೀರಿ ಯವಜನ ವಿನಿಮಯ ಕಾರ್ಯಕ್ರಮ…

Promotion

ಮೈಸೂರು,ಮಾ,5,2020(www.justkannada.in):  ಸೂಕ್ಷ್ಮ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರ ಯುವಕರನ್ನ ರಾಜ್ಯಕ್ಕೆ  ಕರೆಸಿ ಬಾಂಧವ್ಯ ಬೆಸೆಯುವಂತ ಕಾರ್ಯ ಕಾಶ್ಮೀರಿ ಯವಜನ ವಿನಿಮಯ ಕಾರ್ಯಕ್ರಮ ಇಂದಿನಿಂದ ಮೈಸೂರಿನಲ್ಲಿ ಆರಂಭವಾಗಲಿದೆ.

ಇಂದಿನಿಂದ   ಮಾರ್ಚ್ 11ರವರೆಗೆ ಈ  ಕಾರ್ಯಕ್ರಮ ನಡೆಯಲಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮಾಹಿತಿ ನೀಡಿದ ಅಪರ ಜಿಲ್ಲಾಧಿಕಾರಿ ಪೂರ್ಣಿಮಾ. ನೆಹರು ಯುವ ಕೇಂದ್ರ, ಭಾರತ ಸರ್ಕಾರ ಗೃಹ ಸಚಿವಾಲಯ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಇವರ ಸಂಯುಕ್ತಾಶ್ರಯದಲ್ಲಿ ಪ್ರಧಾನ ಮಂತ್ರಿಗಳ ಆದೇಶದಂತೆ ಜಮ್ಮು ಕಾಶ್ಮೀರದ ಅನಂತ್‍ನಾಗ್, ಕುಪ್ಪಾರ, ಬಾರಾಮುಲ್ಲ, ಬುದ್ಗಾಮ್, ಶ್ರೀನಗರ ಹಾಗೂ ಪುಲ್ವಾಮ ಜಿಲ್ಲೆಗಳಲ್ಲಿ ಆಯ್ದ 132 ಯುವಜನರು ಬರಲುದ್ದಾರೆ. ಮೈಸೂರಿನ ಯೂತ್ ಹಾಸ್ಟೆಲ್‍ನಲ್ಲಿ ಮಾರ್ಚ್ 5 ರಿಂದ 11 ರವರೆಗೆ ಆಯೋಜಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಸೂಕ್ಷ್ಮ ಪ್ರದೇಶ ವಾಗಿದೆ ಹಾಗಾಗಿ ಅಲ್ಲಿ ಯುವಕರನ್ನ ಕರೆಸಿ ಬಾಂಧವ್ಯ ಬೆಸೆಯುವಂತ ಕಾರ್ಯ ಇದಾಗಿದೆ ಎಂದು ತಿಳಿಸಿದರು.

ಬೇರೆ ಬೇರೆ ರಾಜ್ಯಗಳಲ್ಲು ಈ ಕಾರ್ಯಕ್ರಮ ನಡೆಯಲಿದೆ. ಅಲ್ಲಿನ ಯುವಕರನ್ನ ಇಲ್ಲಿನ ವಾತಾವರಣ. ಜನರು ಹೇಗೆ ಸಹಬಾಳ್ವೆ ನಡೆಸುತ್ತಾರೆ. ಇಲ್ಲಿನ ಸಾಂಸ್ಕೃತಿಕೆ, ಭಾಷೆ, ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಮೈಸೂರಿನಲ್ಲಿ ಮೊದಲ ಬಾರಿಗೆ ಕಾಶ್ಮೀರಿ ಯುವಕರು ಭಾಗವಹಿಸುತ್ತಿದ್ದಾರೆ.  22 ಮಂದಿ ಯುವತಿಯರು ಭಾಗವಹಿಸುತ್ತಿದ್ದಾರೆ. ಯೂತ್ ಕ್ಲಬ್ ಮೆಂಬರ್ ಗಳನ್ನು ಆಯ್ಕೆ ಮಾಡಲಾಗಿದೆ. ಮೈಸೂರು ನಗರದ ಸಾಂಸ್ಕೃತಿಕ ತಾಣಗಳು, ಇಲ್ಲಿನ ಕೈಗಾರಿಕಾ ಅಭಿವೃದ್ಧಿ, ಪಾರಂಪರಿಕ ತಾಣಗಳಿಗೆ ಅವರು ಭೇಟಿ ನೀಡಿಲಿದ್ದಾರೆ. ಸಂಪನ್ಮೂಲಗಳ ವ್ಯಕ್ತಿಗಳಿಂದ ವಿಚಾರ ವಿನಿಮಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಎಡಿಸಿ ಪೂರ್ಣಿಮಾ ಅವರು ತಿಳಿಸಿದರು.

Key words:  Kashmiri youth –exchange- program – Mysore – today.