ಬೆಳ್ಳಂಬೆಳಿಗ್ಗೆ ಕೆಎಎಸ್ ಅಧಿಕಾರಿಗೆ ಶಾಕ್ ಕೊಟ್ಟ ಎಸಿಬಿ: ಏಕಕಾಲದಲ್ಲಿ ಆರು ಕಡೆ ದಾಳಿ…

Promotion

ಬೆಂಗಳೂರು,ನವೆಂಬರ್,7,2020(www.justkannada.in):  ಬೆಳ್ಳಂಬೆಳಿಗ್ಗೆ ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಅವರಿಗೆ ಎಸಿಬಿ ಶಾಕ್ ನೀಡಿದ್ದು, ಬಿ. ಸುಧಾ ಅವರ ಮನೆ ಸೇರಿ ಆ ಕಡೆಗಳಲ್ಲಿ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.KAS officer –ACB- attack - bangalore

ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಆಡಳಿತಾಧಿಕಾರಿಯಾಗಿರುವ ಸುಧಾ ಅವರ ಕೊಡಿಗೇನಹಳ್ಳಿಯಲ್ಲಿರುವ ನಿವಾಸದ ಮೇಲೆ ಇದೀಗ ಎಸಿಬಿ ಅಧಿಕಾರಿಗಳು ದಾಳಿ  ನಡೆಸಿದ್ದಾರೆ.

ಹಾಗೆಯೇ ಯಲಹಂಕದಲ್ಲಿರುವ ಫ್ಲಾಟ್, ಬ್ಯಾಟರಾಯನಪುರದ ಮನೆ, ಬಿಇಎಂಎಲ್ ನಲ್ಲಿರುವ ನಿವಾಸ, ಶಾಂತಿನಗರದಲ್ಲಿರುವ ಕಚೇರಿ ಹಾಗೂ ಉಡುಪಿ ಜಿಲ್ಲೆಯ ಹೆಬ್ರಿಯ ತಂಕಬಟ್ಟಿನ ಮನೆಯ ಮೇಲೆಯೂ ದಾಳಿ ನಡೆಸಲಾಗಿದೆ. ಏಕ ಕಾಲದಲ್ಲಿ ಆರು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಅವರು ಈ ಹಿಂದೆ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಭೂಸ್ವಾಧೀನಾಧಿಕಾರಿ ಆಗಿದ್ದ ಸುಧಾ ಅವರು ಅಕ್ರಮ ಆಸ್ತಿ ಗಳಿಕೆ, ಅವ್ಯವಹಾರ ನಡೆಸಿದ ಆರೋಪದ  ಮೇಲೆ ಎಸಿಬಿಯಲ್ಲಿ ದೂರು ದಾಖಲಾಗಿತ್ತು. ಸಾರ್ವಜನಿಕರೊಬ್ಬರು ಕೆಎಸ್ ಅಧಿಕಾರಿ ಬಿ.ಸುಧಾ ಅವರ ವಿರುದ್ಧ ಅಕ್ರಮ ಆಸ್ತಿಗಳಿಗೆ ಅವ್ಯವಹಾರ ಸಂಬಂಧ ಖಾಸಗಿ ದೂರು ದಾಖಲಿಸಿದ್ದರು.

Key words: KAS officer –ACB- attack – bangalore