ತರಾತುರಿಯಲ್ಲಿ ಶಾಲೆ ತೆರೆಯಲ್ಲ , ಮಾಧ್ಯಮಗಳ ಮಾಹಿತಿ ಅಧಿಕೃತವಲ್ಲ : ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ.

Promotion

 

ಬೆಂಗಳೂರು, ಮೇ 16, 2020 : (www.justkannada.in news ) ಯಾವುದೇ ಕಾರಣಕ್ಕೂ ತರಾತುರಿಯಲ್ಲಿ ನಮ್ಮ ರಾಜ್ಯದ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಕೆಲ ಮಾಧ್ಯಮಗಳಲ್ಲಿ ಶಾಲೆ ಆರಂಭ ಸಂಬಂಧ ಈಗಾಗಲೇ ದಿನಾಂಕ, ಯಾವ ರೀತಿ ಇರಬೇಕು, ಯಾವ ತರಗತಿ ಎಷ್ಟು ಸಮಯಕ್ಕೆ ಎಂಬ ಬಗ್ಗೆ ವರದಿಗಳು ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ, ಪೋಷಕರು ಆತಂಕಕ್ಕೆ ಒಳಗಾಗದೆ ಇರಲು ಖುದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಈ ಸ್ಪಷ್ಟನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ( ಫೇಸ್ ಬುಕ್ ಮುಖಪುಟದಲ್ಲಿ ) ಪ್ರಕಟಿಸಿದ್ದಾರೆ.
ಒಟ್ಟಾರೆ ಸಚಿವ ಸುರೇಶ್ ಕುಮಾರ್ ಹೇಳಿರುವುದಿಷ್ಟು….

karnataka-suresh.kumar-education-minister-school-re.open-not-yet-desided

ರಾಜ್ಯದ ಶಾಲಾ ಮಕ್ಕಳ ಪೋಷಕರಿಗೆ ಒಂದು ಮಾಹಿತಿ. ತರಾತುರಿಯಲ್ಲಿ ನಮ್ಮ ರಾಜ್ಯದ ಶಾಲೆಗಳನ್ನು ತೆರೆಯುವುದಿಲ್ಲ. ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ನಮ್ಮದು. ಮಾಧ್ಯಮಗಳಲ್ಲಿ ಬರುತ್ತಿರುವ ಕೆಲ ಮಾಹಿತಿಗಳು ಅಧಿಕೃತವಲ್ಲ. ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.

key words : karnataka-suresh.kumar-education-minister-school-re.open-not-yet-desided