ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಚುನಾವಣೆ : ಜಿಟಿಡಿ ಬಣ ಮೇಲುಗೈ

Promotion

ಮೈಸೂರು,ಮಾರ್ಚ್,28,2021(www.justkannada.in) : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಚುನಾವಣೆಯಲ್ಲೂ ಜಿಟಿಡಿ ಮೇಲುಗೈ ಸಾಧಿಸಿದ್ದು, ಮುಂದಿನ ಐದು ವರ್ಷಗಳ ಅವಧಿಗೆ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಿಟಿಡಿ ಬಣಕ್ಕೆ ಜಯ ಲಭಿಸಿದೆ.

Government,Social,Economic,Educational,survey,Report,Should,receive,Former CM,Siddaramaiah 

29 ಜಿಲ್ಲಾ ಯೂನಿಯನ್ನುಗಳಿಂದ 13 ಸ್ಥಾನಗಳಿಗೆ 26   ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಮೈಸೂರು ವಿಭಾಗ ಮೂರು ಸ್ಥಾನಗಳಿಗೆ ಶಾಸಕ ಜಿ.ಟಿ.ದೇವೇಗೌಡ, ಬಿ.ಸಿ.ಲೋಕಪ್ಪ ಗೌಡ, ಜಯಕರ ಶೆಟ್ಟಿ ಬಿ.ಇಂದ್ರಾಳಿ ಆಯ್ಕೆಯಾಗಿದ್ದಾರೆ.

ಚುನಾಯಿತ ಪ್ರತಿನಿಧಿಗಳ ವಿವರ

ಮೈಸೂರು ವಿಭಾಗ ( ಮೂರು ಸ್ಥಾನಗಳು) ಜಿ.ಟಿ.ದೇವೇಗೌಡ,  ಬಿ.ಸಿ.ಲೋಕಪ್ಪ ಗೌಡ, ಜಯಕರ ಶೆಟ್ಟಿ  ಬಿ .ಇಂದ್ರಾಳಿ. ಬೆಂಗಳೂರು ವಿಭಾಗ (ನಾಲ್ಕು ಸ್ಥಾನಗಳು) ಹೆಚ್. ಎನ್.ಅಶೋಕ್,  ಎ.ಸಿ.ನಾಗರಾಜ್, ರಾಮಿರೆಡ್ಡಿ, ಬಿ.ಡಿ.ಭೂ ಕಾಂತ. ಬೆಳಗಾವಿ ವಿಭಾಗ (ಮೂರು ಸ್ಥಾನಗಳು) ಜಗದೀಶ ಮಲ್ಲಿಕಾರ್ಜುನ ಕವಟಗಿ ಮಠ, ಈರಣ್ಣ ಪಟ್ಟಣ ಶೆಟ್ಟಿ, ಬಸವರಾಜ್ ನೀ.  ಅರಬ ಗೊಂಡ. ಕಲಬುರ್ಗಿ ವಿಭಾಗ(ಮೂರು  ಸ್ಥಾನಗಳು) ಶೇಖರ ಗೌಡ ಪಾಟೀಲ್, ಉಮಾಕಾಂತ ನಾಗಮಾರಪಳ್ಳಿ, ಜೆ.ಎಂ.ಶಿವಪ್ರಸಾದ್ ಇತರೆ ಸಹಕಾರ ಸಂಘಗಳ ಕ್ಷೇತ್ರ ಗದಿಗೆಪ್ಪ ಗೌಡ ಪಾಟೀಲ್ ಆಯ್ಕೆಯಾಗಿದ್ದಾರೆ.Karnataka-State-Cooperation-General Assembly-Election-GTD- faction-dominates

ಚುನಾಯಿತ ನಿರ್ದೇಶಕರುಗಳನ್ನು ಮಹಾ ಮಂಡಳ ಆಡಳಿತಾಧಿಕಾರಿ ವೈ.ಎಚ್.ಗೋಪಾಲ್ ಕೃಷ್ಣ. ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಅರುಣ್ ಕುಮಾರ್, ಕಾರ್ಯದಶಿ೯ ಲಕ್ಷ್ಮೀ ಪತಯ್ಯ,ಚುನಾವಣಾಧಿಕಾರಿ ಸತೀಶ್ ಚಂದ್ರ ಅಭಿನಂದಿಸಿದ್ದಾರೆ.

key words : Karnataka-State-Cooperation-General Assembly-Election-GTD- faction-dominates