ವಿದೇಶ ಬಂಡವಾಳ ಹೂಡಿಕೆ, ಐಟಿ ಸೆಕ್ಟರ್ ನಲ್ಲಿ ಕರ್ನಾಟಕ ಮುಂದು: ರಾಜ್ಯವನ್ನ ಹಾಡಿಹೊಗಳಿದ ಪ್ರಧಾನಿ ಮೋದಿ.

Promotion

ಬೆಂಗಳೂರು,ನವೆಂಬರ್,11,2022(www.justkannada.in): ವಿದೇಶ ಬಂಡವಾಳ ಹೂಡಿಕೆಯಲ್ಲಿ, ಐಟಿ ಸೆಕ್ಟರ್ ನಲ್ಲಿ ಕರ್ನಾಟಕ ಮುಂದಿದೆ. ಬಂಡವಾಳ ಹೂಡಿಕೆಯ ಫಲ ಕರ್ನಾಟಕಕ್ಕೆ ಸಿಕ್ಕಿದೆ. ಬಂಡವಾಳಗಾರರನ್ನ ಸೆಳೆಯುವಲ್ಲಿ ಕರ್ನಾಟಕ ಮುಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದರು.

ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ನಿರ್ಮಾಣವಾಗಿರುವ ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಿದ ನಂತರ ಸಾರ್ವಜನಿಕರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಹೇಳಿದ್ದಿಷ್ಟು.

ಬೆಂಗಳೂರಿನ ವಿಶೇಷ ಕಾರ್ಯಕ್ರಮಕ್ಕೆ ಬಂದಿದ್ದು ನನ್ನ ಸೌಭಾಗ್ಯ.   ಇಂದು ಕರ್ನಾಟಕಕ್ಕೆ ಮೇಡ್ ಇನ್ ಇಂಡಿಯಾ ರೈಲು ಸಿಕ್ಕಿದೆ. ಕರ್ನಾಟಕಕ್ಕೆ ವಂದೇ ಬಾರತ್ ರೈಲು ದೊರಕಿದೆ. ಟರ್ಮಿನಲ್ -2 ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೆ.  ಕೆಐಎಬಿ ಏರ್ ಪೋರ್ಟ್ ಟರ್ಮಿನಲ್-2  ಬಹಳ ಸುಂದರವಾಗಿದೆ. ಸ್ಟಾರ್ಟ್ ಅಪ್ ನಲ್ಲಿ ಬೆಂಗಳೂರು ನಗರದ ಕೊಡುಗೆ ಬಹಳಷ್ಟಿದೆ. ಸ್ಟಾರ್ಟ್ ಅಪ್ ಅನ್ನೋದು ವಿಶ್ವಾಸತೆ ಹೊಂದಿದೆ. ಬೆಂಗಳೂರು ಅನ್ನೊದು ಯುವಶಕ್ತಿಯ ಪ್ರತಿಬಿಂಬವಾಗಿದೆ.  ವಂದೇ ಭಾರತ್ ರೈಲು ನವ ಭಾರತಕ್ಕೆ ಮುನ್ನುಡಿ .  ಕೇವಲ ಇದು ಒಂದು ರೈಲಲ್ಲ.  ಭಾರತ ವೇಗವಾಗಿ ಓಡಲು ಬಯಸುತ್ತಿದೆ. ಭಾರತೀಯ ರೈಲ್ವೆಗೆ  ಹೊಸರೂಪ ಕೊಡುತ್ತೇವೆ. ಗೂಡ್ಸ್ ರೈಲುಗಳನ್ನ ಹೆಚ್ಚಳ ಮಾಡತ್ತೇವೆ.  ಮುಂದಿನ ದಿನಗಳಲ್ಲಿ ಭಾರತೀಯ ರೈಲ್ವೆ ಕಾಯಕಲ್ಪ ಮಾಡುತ್ತೆ ಎಂದರು.

ಕರ್ನಾಟಕ ಡಬಲ್ ಇಂಜಿನ್ ಶಕ್ತಿಯಲ್ಲಿ ನಡೆಯುತ್ತಿದೆ.  ಈ ಬಗ್ಗೆ ನನಗೆ ಖುಷಿ ಇದೆ. ಇಂದು ಭಾರತದಲ್ಲಿ ಹಲವು ಬದಲವಣೆಯನ್ನ ಕಂಡಿದೆ. ದೇಶ ಅಭಿವೃದ್ಧಿ ಪಥದಲ್ಲಿ ನಡೆಯುತ್ತಿದೆ.

ಕಳೆದ 3 ವರ್ಷದಲ್ಲಿ  ಕೋವಿಡ್ ನಿಂದ ಸಂಕಷ್ಟದಲ್ಲಿತ್ತು ಆದರೆ ಕರ್ನಾಟಕದಲ್ಲಿ 4 ಲಕ್ಷಕೋಟಿ ಬಂಡವಾಳ ಹೂಡಿಕೆಯಾಗಿದೆ.  8 ವರ್ಷಗಳ ಹಿಂದೆ ಡಿಜಿಟಲ್ ಪೇಮೆಂಟ್ ನ ಕಲ್ಪನೆಯೇ ಇರಲಿಲ್ಲ. 5ಜಿ ಬಗ್ಗೆಯೂ ಯಾರೂ ಯೋಚನೆ ಮಾಡಿರಲಿಲ್ಲ. ಇಂದು ಭಾರತ ಹಲವು ಕ್ಷೇತ್ರಗಳಲ್ಲಿ ಬದಲಾವಣೆ ಕಂಡಿದೆ ಎಂದು ಮೋದಿ ನುಡಿದರು.

ವಿದೇಶ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮುಂದಿದೆ.   ಕೇವಲ ಐಟಿ ಮಾತ್ರವೇ ಅಲ್ಲ, ಜೈವಿಕ ತಂತ್ರಜ್ಞಾನ, ರಕ್ಷಣಾ ಉತ್ಪಾದನಾ ಘಟಕಗಳಲ್ಲಿ ಹೂಡಿಕೆ ಹೆಚ್ಚುತ್ತಿದೆ. ವೈಮಾನಿಕ ಕ್ಷೇತ್ರದಲ್ಲಿ ಕರ್ನಾಟಕ ದೊಡ್ಡ ಸಾಧನೆ ಮಾಡಿದೆ. ಸೇನೆಗೆ ಪೂರೈಕೆಯಾಗುತ್ತಿರುವ ವಿಮಾನಗಳಲ್ಲಿ ಕರ್ನಾಟಕ ಸಿಂಹಪಾಲು ಪಡೆದಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿಯೂ ಕರ್ನಾಟಕ ಮುಂದಿದೆ. ಫಾರ್ಚೂನ್ 400 ಪಟ್ಟಿಯಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡುತ್ತಿದೆ.ಹಲವು ಗಣನೀಯ ಸಾಧನೆ ಮಾಡಿದ್ದೇವೆ ಎಂದು ತಿಳಿಸಿದರು.

Key words: Karnataka – investment- IT –sector- PM Modi -praises