ಎನ್ ಇಪಿ ಅನುಷ್ಠಾನದಲ್ಲಿ ಕರ್ನಾಟಕವೇ ಮೊದಲು….

Promotion

ಬೆಂಗಳೂರು, ಆಗಸ್ಟ್,8, 2021 (www.justkannada.in): ಕರ್ನಾಟಕ ಸರ್ಕಾರವು ಶನಿವಾರದಂದು, ಪ್ರಸಕ್ತ ಶೈಕ್ಷಣಿಕ ವರ್ಷ 2021-22ದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಅನುಷ್ಠಾನಗೊಳಿಸುವಂತೆ ಆದೇಶಿಸಿದೆ.

ಬಿ.ಎ. ಅಥವಾ ಬಿ.ಎಸ್ಸಿ. ಪದವಿ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಹೊಸ ಎನ್ ಇಪಿ ಪ್ರಕಾರ ಎರಡು ವಿಷಯಗಳನ್ನು (ಮುಖ್ಯ ವಿಷಯ) ಆಯ್ಕೆ ಮಡಿಕೊಳ್ಳಬೇಕು. ಪದವಿ ಕೋರ್ಸ್ ಗೆ ಮೂರನೇ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳು ಒಂದು ಸಬ್ಜೆಕ್ಟ್ ಅನ್ನು ಮುಖ್ಯ ಸಬ್ಜೆಕ್ಟ್ ಆಗಿ ಮತ್ತು ಇನ್ನೊಂದು ಸಬ್ಜೆಕ್ಟ್ ಅನ್ನು ಮೈನರ್ ಸಬ್ಜೆಕ್ಟ್ ಆಗಿ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಎರಡೂ ವಿಷಯಗಳನ್ನು ಮುಖ್ಯ ವಿಷಯಗಳನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು.

ಮುಖ್ಯ ವಿಷಯದ ಆಯ್ಕೆ ಜೊತೆಗೆ, ಕನ್ನಡ ಹಾಗೂ ಮತ್ತೊಂದು ಭಾಷೆಯನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಳ್ಳಬೇಕು. ಜೊತೆಗೆ, ಪಠ್ಯಕ್ರದ ಪ್ರಕಾರ ಮುಕ್ತ ಆಯ್ಕೆ  ಹಾಗೂ ಕಡ್ಡಾಯ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪಿಯುಸಿ ಅಥವಾ ೧೦+೨ ಹಂತದಲ್ಲಿ ಕನ್ನಡ ಓದದೇ ಇರುವಂತಹ ವಿದ್ಯಾರ್ಥಿಗಳಿಗಾಗಿ ಅಥವಾ ಕನ್ನಡ ಅಲ್ಲದೇ ಬೇರೆ ಮಾತೃಭಾಷೆ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಕನ್ನಡ ಪಠ್ಯಕ್ರಮವನ್ನು ಸಿದ್ಧಪಡಿಸುವಂತೆ ನಿರ್ದೇಶಿಸಲಾಗಿದೆ.

ಸುದ್ದಿ ಮೂಲ; ಬೆಂಗಳೂರ್ ಮಿರರ್

Key words: Karnataka – first – implementation – NEP.