ಕರ್ನಾಟಕ BJP : ನೇಪಥ್ಯಕ್ಕೆ ಸರಿದ ಹಿರಿಯ ನಾಯಕರು..

karnataka-BJP-leaders-no-platform

kannada t-shirts

 

ಆಶಾ ಕೃಷ್ಣಸ್ವಾಮಿ,

ಬೆಂಗಳೂರು : ಕರ್ನಾಟಕದಲ್ಲಿ ಬಿಜೆಪಿಗೆ , ವಿರೋಧ ಪಕ್ಷದ ಟೀಕೆಗಳು ಎದುರಾದಾಗ ಹಾಗೂ ಪಕ್ಷ ರಾಷ್ಟ್ರಮಟ್ಟದಲ್ಲಿ ನಿಸ್ಸಂದಿಗ್ಧವಾದ ನಿರ್ಧಾರಗಳನ್ನು ಕೈಗೊಂಡಾಗ ಅದನ್ನು ಸಮರ್ಥಿಸಿಕೊಳ್ಳುವ ನಾಯಕರ ಕೊರತೆ ಇದೆಯೇ? ಯಾವುದೇ ಒಂದು ವಿಷಯ ಅಥವಾ ಸಮಸ್ಯೆಗೆ ಸಂಬಂಧಪಟ್ಟಂತೆ ಬಹುಗ್ರಹಿಕೆಗಳನ್ನು ಆಲಿಸಲು ಪಕ್ಷದಲ್ಲಿ ಯಾವುದಾದರೂ ಆಂತರಿಕ ರಚನೆ ಇದೆಯೇ?

ಪಕ್ಷದಲ್ಲಿ ಪ್ರಸ್ತುತ ಎಲ್ಲರೂ ಗೌರವಿಸುವಂತಹ ಹಿರಿಯ ನಾಯಕರ ಸಂಖ್ಯೆ ಬಹಳ ಕಡಿಮೆಯಾಗಿದೆ. ಪಕ್ಷದ ನಾಯಕರು ಮುಕ್ತವಾಗಿ ತಮ್ಮ ಕುಂದುಕೊರತೆಗಳು ಹಾಗೂ ಕಾಳಜಿಗಳನ್ನು ವ್ಯಕ್ತಪಡಿಸಲು ಪಕ್ಷದಲ್ಲಿ ಯಾವುದೇ ವೇದಿಕೆಯಿಲ್ಲ. ಬಿಜೆಪಿಯ ಯಾವುದೇ ನಾಯಕರನ್ನಾದರೂ ಕೇಳಿ, ಪಕ್ಷದ ರಾಜ್ಯ ಘಟಕವನ್ನು ನಿಯಂತ್ರಿಸಲು ಯಾರೂ ಇಲ್ಲ ಎಂಬ ಉತ್ತರ ದೊರೆಯುತ್ತದೆ. ಪಕ್ಷದ ಕೆಲಸದಿಂದ ಪ್ರಜ್ಞಾಪೂರ್ವಕವಾಗಿ ಪಕ್ಕಕ್ಕೆ ಸರಿದಿರುವ ಹಿರಿಯ ನಾಯಕರೊಬ್ಬರು ವ್ಯಂಗ್ಯದ ಮಾತುಗಳ ಪ್ರಕಾರ ಪಕ್ಷದ ಅಧ್ಯಕ್ಷರ ಕಿವಿಯೇ ಕುಂದುಕೊರತೆಗಳ ಕೋಶವಾಗಿದೆ.

ಪಕ್ಷದ ಮುಖ್ಯಸ್ಥರಾಗಿ ರಾಜ್ಯ ಬಿಜೆಪಿ ಅಧ್ಯಕ್ಷರು ಪಕ್ಷದ ಕಿವಿಗಳು ಹಾಗೂ ಕಣ್ಣುಗಳಾಗಿರಬೇಕು. ಆದರೆ ೨೦೧೪ರಿಂದ ಆ ಅಭ್ಯಾಸ ಕ್ರಮೇಣ ಇಳಿಮುಖವಾಗಿದೆ. ಈಗ ಪಕ್ಷ ಯಾವ ಹಂತವನ್ನು ತಲುಪಿದೆ ಎಂದರೇ ಪಕ್ಷದ ಹಾಲಿ ಅಧ್ಯಕ್ಷ ಸ್ಥಾನಕ್ಕೆ ಬೇರೊಬ್ಬ ವ್ಯಕ್ತಿಯ ನೇಮಕಾತಿ ಬೇಕಾಗಿದೆ ಎಂದನಿಸುತ್ತದೆ. ಪಕ್ಷಕ್ಕೆ ಸಾರ್ವಜನಿಕವಾಗಿ ಮುಜುಗುರವನ್ನು ಉಂಟು ಮಾಡುವವರ ವಿರುದ್ಧ ಶೋಕಾಸ್ ನೋಟಿಸ್‌ಗಳನ್ನು ನೀಡುವ ಬೆದರಿಕೆಯೊಂದನ್ನು ಬಿಟ್ಟರೆ, ಪಕ್ಷದ ಅಧ್ಯಕ್ಷರಿಂದ ಯಾವುದೇ ಕ್ರಮ ಇದುವರೆವಿಗೂ ಜರುಗಿಸಲಾಗಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿಯೂ ಇದೇ ಪರಿಸ್ಥಿತಿ ಇದೆ.

ರಾಜ್ಯದಲ್ಲಿ ತನ್ನ ಸ್ಥಾನವನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವ ಬಿಜೆಪಿಯ ವಿಚಾರದಲ್ಲಿ ಪಕ್ಷ ತನ್ನ ಅನೇಕ ಹಿರಿಯ ನಾಯಕರನ್ನು ಖಾಯಂ ಆಗಿ ಕಳೆದುಕೊಂಡಿದೆ ಅಥವಾ ಕೆಲವರನ್ನು ವಯಸ್ಸಿನ ಕಾರಣ ಅಥವಾ ಮತ್ಯಾವುದೋ ಕಾರಣ ನೀಡಿ ಮರೆತೇ ಬಿಟ್ಟಿದೆ. ಇನ್ನೂ ನಿಖರವಾಗಿ ಹೇಳುವುದಾದರೇ ಪಕ್ಷದಲ್ಲಿ ಅಧ್ಯಕ್ಷರು ಅಥವಾ ಮುಖ್ಯಮಂತ್ರಿಗಳ ಪರವಾಗಿ ಮಾತನಾಡಲು ಅಥವಾ ವಿರೋಧ ಪಕ್ಷಗಳಿಂದ ವಿರೋಧ ವ್ಯಕ್ತವಾಗುವ ಯಾವುದೇ ಇತರೆ ಸಚಿವರ ಪರವಾಗಿ ಮಾತನಾಡುವ ಹಿರಿಯ ನಾಯಕರ ಸಂಖ್ಯೆ ಬಹಳ ಕಡಿಮೆ ಇದೆ. ಇತ್ತೀಚೆಗೆ ವಿವಿಧ ಇಲಾಖೆಗಳಲ್ಲಿ ಹಲವು ಹಗರಣಗಳು ಬಹಿರಂಗಗೊಂಡ ಸಂದರ್ಭದಲ್ಲಿ ಕಂಡು ಬಂದ ಬೆಳವಣಿಗೆಗಳು ಇದಕ್ಕೆ ಪೂರಕವೆನ್ನುವಂತಿವೆ.

ಕಳೆದುಹೋದ ಧ್ವನಿಗಳು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೀಣ ಧ್ವನಿಯ ಸಮರ್ಥನೆಯೊಂದನ್ನು ಹೊರತುಪಡಿಸಿದರೆ ಪಕ್ಷದ ಇತರೆ ಯಾವುದೇ ಹಿರಿಯ ನಾಯಕರೂ ಸಹ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಮುಂದಾಗಲಿಲ್ಲ. ಅಂದರೆ, ಸಚಿವರು ಒಳಗೊಂಡಂತೆ ಬಿಜೆಪಿಯ ಬಹುಪಾಲು ನಾಯಕರು ಈ ಆರೋಪಗಳನ್ನು ಒಪ್ಪಿಕೊಂಡಂತೆಯೇ? ಪಕ್ಷದ ನಿಲುವನ್ನು ವ್ಯಕ್ತಪಡಿಸಲು ಅಥವಾ ವಿರೋಧ ಪಕ್ಷದವರನ್ನು ತರಾಟೆಗೆ ತೆಗೆದುಕೊಳ್ಳಲು ಪಕ್ಷದ ಯಾವುದೇ ನಾಯಕರೂ ಸಹ ಒಂದುಗೂಡಿಲ್ಲ ಅಥವಾ ಪ್ರಯತ್ನಿಸಿಲ್ಲ.

ಕುತೂಹಲಕರವಾಗಿ ಸರ್ಕಾರದ ಯಾವುದೇ ಸಾಧನೆಗಳಾಗಲಿ ಅಥವಾ ದುಷ್ಕೃತ್ಯಗಳ ಕುರಿತಾಗಲೀ ಪಕ್ಷದ ರಾಜ್ಯಾಧ್ಯಕ್ಷ ಕಟೀಲ್ ಒಬ್ಬರನ್ನು ಬಿಟ್ಟರೆ ಕರ್ನಾಟಕದಿಂದ ಆಯ್ಕೆಯಾಗಿರುವ ೨೫ ಬಿಜೆಪಿ ಎಂಪಿಗಳು ಉಸಿರೇ ಎತ್ತಿಲ್ಲ. ಪಕ್ಷದ ರಾಜ್ಯಾಧ್ಯಕ್ಷರಾಗಿ ಕಟೀಲ್ ಅವರು ಸ್ವಲ್ಪವಾದರೂ ಸಹ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲೇಬೇಕು. ಒಂದು ವೇಳೆ ಬಿಜೆಪಿಯಿಂದ ಆಯ್ಕೆಯಾಗಿರುವ ಎಂಪಿಗಳು ೨೦೨೪ರಲ್ಲಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿದರೆ ಮತ್ತೊಮ್ಮೆ ನರೇಂದ್ರ ಮೋದಿಯವರ ಹೆಸರೇ ಅವರನ್ನು ಉಳಿಸುತ್ತದೆ ಎಂದು ತಿಳಿದುಕೊಂಡಿರಬಹುದು.

ಪಕ್ಷದ ಬೆಳವಣಿಗೆಗಾಗಿ ಅಪಾರ ಕೊಡುಗೆ ನೀಡಿರುವಂತಹ ಅನೇಕ ಬಿಜೆಪಿ ನಾಯಕರ ರಾಜಕೀಯ ಭವಿಷ್ಯ ಈಗಾಗಲೇ ಅಂತ್ಯಗೊಂಡಿದೆ. ಈ ಪೈಕಿ ಕೆಲವರ ಹೆಸರು ಹೇಳುವುದಾದರೆ ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ರಾಮಚಂದ್ರೇಗೌಡ, ಡಿ.ವಿ. ಸದಾನಂದಗೌಡ, ಡಿ.ಹೆಚ್. ಶಂಕರಮೂರ್ತಿ, ವಾಮನ್ ಆಚಾರ್ಯ, ಇತರರು. ಬಸವರಾಜ ಪಾಟೀಲ ಸೇಡಂ ಅವರು ಬಹಳ ಹಿಂದೇಯೇ ಪಕ್ಷದಲ್ಲಿ ನಿಷ್ಕ್ರೀಯರಾಗಿದ್ದಾರೆ. ವಿ.ಎಸ್. ಆಚಾರ್ಯ ಅವರ ಮರಣದ ನಂತರ ಅವಿಭಜಿತ ದಕ್ಷಿಣ ಕನ್ನಡ ಭಾಗದಲ್ಲಿ ಪಕ್ಷದಲ್ಲಿ ನಿರ್ವಾತವುಂಟಾಗಿದೆ. ಹೆಚ್.ಎನ್. ಅನಂತಕುಮಾರ್ ಅವರ ಹಠಾತ್ ಮರಣದಿಂದಾಗಿ ಸೃಷ್ಟಿಯಾದ ಕೊರತೆಯನ್ನು ಪಕ್ಷ ಇನ್ನೂ ಸೂಕ್ತ ವ್ಯಕ್ತಿಯೊಂದಿಗೆ ತುಂಬಬೇಕಿದೆ. ಪಕ್ಷ ಈಗಲೂ ಸಹ ಕೆಲವೊಮ್ಮೆ ದಿವಂಗತ ಬಿ.ಬಿ. ಶಿವಪ್ಪ ಅವರ ಕೊಡುಗೆಗಳನ್ನು ಸ್ಮರಿಸುತ್ತದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದೆಹಲಿಗೆ ಸೀಮಿತಗೊಂಡಿದ್ದು, ರಾಜ್ಯ ನಾಯಕರಾಗಿ ಪರಿಗಣಿಸಲಾಗುವುದಿಲ್ಲ. ಯಡಿಯೂರಪ್ಪ ಒಬ್ಬರನ್ನು ಹೊರತುಪಡಿಸಿದರೆ ಪಕ್ಷ ತನ್ನ ಬಹುಪಾಲು ಹಿರಿಯರಿಗೆ ಟಾಟಾ ಹೇಳುವಂತಿದೆ. ಜಗದೀಶ್ ಶೆಟ್ಟರ್ ಅವರಿಗೆ ಪ್ರಸ್ತುತ ೬೬ ವರ್ಷ ವಯಸ್ಸು. ಹಾಗಾಗಿ ಅವರೂ ಸಹ ಹಿರಿಯರ ವರ್ಗದಡಿ ಸೇರುತ್ತಾರೆ. ಆದರೆ ಅವರು ಕೇವಲ ಧಾರವಾಡ ಕ್ಷೇತ್ರಕ್ಕೆ ಮಾತ್ರ ಪೂರಕವಾಗಿದ್ದಾರೆ. ಜೊತೆಗೆ ಅವರ ಜಾತಿಯೇ ಅವರಿಗೆ ಒಂದು ಪ್ಲಸ್ ಪಾಯಿಂಟ್ ಆಗಿದೆ.

ರಾಜ್ಯ ಬಿಜೆಪಿ, ೨೦೧೪ರಲ್ಲಿ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ನಡೆದಂತೆ, ತನ್ನ ಹಿರಿಯರಿಗೆ ಗೌರವಯುತವಾದ ನಿವೃತ್ತಿಯನ್ನು ನೀಡುವ ಪ್ರಕ್ರಿಯೆಯಲ್ಲಿದೆ ಎಂದನಿಸುತ್ತದೆ. ಮೇಲಾಗಿ ಇದು ಸ್ವಾಭಾವಿಕವೂ ಹೌದು. ಕವಿ ಆಲ್ಫ್ರೆಡ್ ಟೆನ್ನಿಸನ್ ಅವರು ಹೇಳಿರುವಂತೆ, “ಹೊಸದಕ್ಕೆ ಸ್ಥಳ ನೀಡಲು ಹಳೆಯ ಕ್ರಮದಲ್ಲಿ ಬದಲಾವಣೆಯಾಗುತ್ತದೆ,” (The old order changeth, yielding place to the new) ಆದರೆ ಹೊಸ ಕ್ರಮ ಸ್ಥಿರಗೊಳ್ಳುವವರೆಗೂ ಈ ಪ್ರಕ್ರಿಯೆಯಲ್ಲಿ ಅನೇಕ ತಡೆಗಳು ಎದುರಾಗಬಹುದು. ಪ್ರಸ್ತುತ, ವಿಭಜನೆಗೊಂಡಿರುವ ಸಂಘ ಹಾಗೂ ಸಂಸ್ಥೆಯೇ ಪೋಷಿಸಿರುವ ಉದಾಸೀನತೆ, ಅಸಿಹುಷ್ಣತೆ ಹಾಗೂ ಗುಂಪುಗಾರಿಕೆಗಳು ಇದೇ ರೀತಿ ಮುಂದುವರೆಯಲಿದೆ.

Key words : karnataka-BJP-leaders-no-platform

ENGLISH SUMMARY : 

The old order changeth in BJP but where is the new order?

Asha Krishnaswamy

Bengaluru : Is the BJP in Karnataka lacking senior leaders who can defend the party in the face of opposition and unequivocally support decisions taken at the top-level? Is there an internal structure in place for the party to listen to multiple perspectives on an issue or grievances?

There aren’t many senior leaders remaining in the party who can command respect. There is no platform where party leaders at all levels can freely express their grievances and concerns. Talk to any BJP leader worth the name and they will admit that none has control over the state unit. The ears of the party president serve as the grievance cell, sarcastically said a senior leader who has consciously moved away from the organization work.

The state BJP president, by being the head of the party, should be in the ears and eyes of the party. But that practise has slowly dimmed since 2014. And now, the party has reached such a stage that it is constrained to appoint a replacement for the current president.

Except for threatening to issue show-cause notices to those who embarrass the party in public, no action is taken by the president. Of course, the situation is no different in the Congress and the JD (S). Loose cannons have a field day at all the parties.

In the case of the BJP, which is struggling to salvage its image in the state, it has either lost many senior leaders forever or sent some to oblivion due to the age factor or some other reason. To be more specific, the party has few senior leaders who can speak up for their president or chief minister, or any minister who may face criticism from the opposition. This became obvious when a day out; a day in the ruling dispensation, was facing a barrage of criticism over the alleged scams in various departments.

Lost voices

Except for the countering by Chief Minister Basavaraj Bommai in a feeble voice, no senior leader is in a mood to counter the Congress. Does that mean that a majority of the BJP leaders, including ministers, are endorsing the allegations? Hardly any leaders are seen coming together on a single platform to either espouse the party’s stand or denounce the Opposition.

Interestingly, all the 25 BJP MPs from Karnataka except Kateel remain aloof when it comes to their party’s government’s deeds or misdeeds in the state. Of course, Kateel, in his position, has to offer his comments. Probably, the MPs are aware that if they happen to contest in 2024, their saviour could be Narendra Modi again. The political careers of many BJP leaders who have contributed to the party’s growth have almost come to an end. To name a few—BS Yediyurappa, KS Eshwarappa, Ramachandra Gowda, D V Sadananda Gowda, DH Shankarmurthy, Vaman Acharya, among others. Basavaraj Patil Sedam long ago became inactive in the party, while VS Acharya’s demise created a vacuum for the party in the undivided Dakshina Kannada.

The void created by the sudden demise of H.N. Anant Kumar is still felt by the party. At times, the late BB Shivappa’s contributions are still recollected by the party. Union Minister Prahlad Joshi has been confined to Delhi and is not perceived as a state leader. Except for Yediyurappa, the party can probably say bye to many of the seniors. Though Jagadish Shettar, 66, comes under the senior category, he remains relevant only to the Dharwad region. His caste is also a plus for him.

The state BJP, as it did at the Delhi level before the 2014 Lok Sabha elections, is in the process of giving a graceful exit to its seniors. This is a natural process too. As poet Alfred Tennyson says, ‘ The old order changeth, yielding place to the new ‘. But the process is bound to see many hiccups till the new order stabilizes. For now, indifference, intolerance, and groups nurtured by the divided Sangh as well as the organisation will continue.

website developers in mysore