ಕನ್ನಡಿಗರನ್ನ ತುಳಿದು ಬೇರೆಯವರಿಗೆ ಪಟ್ಟ: ಸಿಎಂ ಬಿಎಸ್ ವೈ ಮೋಸಗಾರ – ವಾಟಾಳ್ ನಾಗರಾಜ್ ಕಿಡಿ…

Promotion

ಬೆಂಗಳೂರು,ಡಿಸೆಂಬರ್,5,2020(www.justkannada.in):  ಮರಾಠ ಅಭಿವೃದ್ದಿ ನಿಗಮ ರಚನೆ ಮಾಡಿ ಅನುದಾನ ನೀಡಿರುವ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಬಂದ್ ಗೆ ಕರೆ ನೀಡಿ ಕನ್ನಡ ಪರ ಸಂಘಟನೆಗಳ ಇಂದು  ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.logo-justkannada-mysore

ಈ ಮಧ್ಯೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ವೇಳೆ ಮಾಧ್ಯಗಳ ಜತೆ ಮಾತನಾಡಿದ ವಾಟಾಳ್ ನಾಗರಾಜ್, 25 ಸಾವಿರ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನ ಬಂಧಿಸಿದ್ದಾರೆ. ಪೊಲೀಸರು ಮಫ್ತಿಯಲ್ಲಿ ಬಂದು ಬಂಧಿಸಿದ್ದಾರೆ. ಆದರೂ ಬಂದ್ ಯಶಸ್ವಿಯಾಗಿಸಿದ್ದೇವೆ ಎಂದರು.Karnataka bandh-protest-kannada organization-vatal nagaraj

ರಾಜ್ಯಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಮೋಸಗಾರ. ಕನ್ನಡಿಗರನ್ನ ತುಳಿದು ಮರಾಠಿ, ತಮಿಳು, ತೆಲುಗುನವರಿಗೆ ಪಟ್ಟ ಕಟ್ಟುತ್ತಿದ್ದಾರೆ. ಬಿಎಸ್ ವೈ ಮಾಡುತ್ತಿರುವ ಮೋಸದಿಂದ ನೋವಾಗಿದೆ.  ಜೈಲುಭರೋ ಚಳವಳಿಗಾಗಿ ಬುಧವಾರ ಸಭೆ ಕರೆದಿದ್ದೇವೆ. ಇಂದಿನ ಬಂದ್ ಯಶಸ್ವಿಯಾಗಿದೆ ಎಂದರು.

Key words: Karnataka bandh-protest-kannada organization-vatal nagaraj