ಸರಕಾರಿ ಶಾಲೆಗಳಲ್ಲಿ ಸಂಗ್ರಹಗೊಂಡಿರುವ ಹಾಲಿನ ಪೌಡರ್, ಅಡುಗೆ ಎಣ್ಣೆ ‘ ಎಕ್ಸಪೈರಿ ಡೇಟ್ ‘ ಮೀರುತ್ತಿವೆ…!

 

ಮೈಸೂರು, ಏ.04, 2020 : (www.justkannada.in news) : ಬಿಸಿಯೂಟ ಯೋಜನೆಯಡಿ ಸರಕಾರಿ ಶಾಲೆಗಳಲ್ಲಿ ಸಂಗ್ರಹಗೊಂಡಿರುವ ನಂದಿನಿ ಹಾಲಿನ ಪುಡಿ ಹಾಗೂ ಅಡುಗೆ ಎಣ್ಣೆ ಸದ್ಯದಲ್ಲೇ ಮುಕ್ತಾಯ ದಿನಾಂಕ (Expiry date) ಮೀರಲಿದ್ದು ಬಳಿಕ ಅವು ಅನುಪಯುಕ್ತವಾಗಲಿದೆ.

ಕೋವಿಡ್ 19 ಹಿನ್ನೆಲೆಯಲ್ಲಿ ಕಳೆದ ಒಂದುವರೆ ತಿಂಗಳಿಂದ ಲಾಕ್ ಡೌನ್ ಜಾರಿಯಲ್ಲಿದ್ದು ಅದು ಈಗ ಮತ್ತೆ ಅನಿವಾರ್ಯ ಸ್ಥಿತಿಯಲ್ಲಿ ಮುಂದುವರೆದಿದೆ. ಲಾಕ್ ಡೌನ್ ಘೋಷಣೆ ಬಳಿಕ ಶಾಲಾ ಮಕ್ಕಳಿಗೆ ಬಿಸಿಯೂಟದಲ್ಲಿ ಬಳಸುವ ಆಹಾರ ಪದಾರ್ಥಗಳ ಪೈಕಿ ಅಕ್ಕಿ, ಬೆಳೆಯನ್ನು ಈಗಾಗಲೇ ತಲಾ ಅಳತೆಯಂತೆ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ.

karnataka-akshara.dasoha-project-rice-dhal-school-kmf-milk.powder-use

ಒಬ್ಬ ವಿದ್ಯಾರ್ಥಿಗೆ 1 ದಿನಕ್ಕೆ 150ಗ್ರಾಂ ನಂತೆ ಅಕ್ಕಿ ( 21 ದಿನಕ್ಕೆ 3 ಕೇಜಿ ) ಹಾಗೂ ದಿನಕ್ಕೆ 75 ಗ್ರಾಂ ನಂತೆ ಬೇಳೆ ( 21 ದಿನಕ್ಕೆ 1 ಕಿಲೋ 575 ಗ್ರಾಂ ನಂತೆ ) ಪ್ರತಿ ವಿದ್ಯಾರ್ಥಿಗೆ ಈಗಾಗಲೇ ವಿತರಿಸಲಾಗಿದೆ. ಕೆಲವೆಡೆ ಇನ್ನು ಆಹಾರ ಸಾಮಾಗ್ರಿಗಳ ದಾಸ್ತಾನು ಇದೆ ಎನ್ನಲಾಗಿದೆ.

ಜತೆಗೆ ಶಾಲೆಗಳಲ್ಲಿ ಇನ್ನೂ ಬಳಕೆ ಮಾಡದ ಹಾಲಿನ ಪೌಡರ್ ಹಾಗೂ ಅಡುಗೆ ಎಣ್ಣೆ ಸಂಗ್ರಹವಿದೆ. ಮಕ್ಕಳಿಗೆ ಬಿಸಿಯೂಟಕ್ಕೂ ಮುನ್ನ ಬೆಳಗ್ಗೆ ಶಾಲೆ ಆರಂಭವಾಗುತ್ತಿದ್ದಂತೆ ಕ್ಷೀರಭಾಗ್ಯ ಯೋಜನೆಯಡಿ ಹಾಲು ವಿತರಿಸುವ ವ್ಯವಸ್ಥೆ ಜಾರಿಯಲ್ಲಿದೆ. ಇದಕ್ಕೆ ಪೂರಕವಾಗಿ ಕೆ.ಎಂ.ಎಫ್ ಸಂಸ್ಥೆ ಹಾಲಿನ ಪುಡಿಯನ್ನು ಮುಂಚಿತವಾಗಿಯೇ ಪೂರೈಕೆ ಮಾಡಿದ್ದು ಅದರ ದಾಸ್ತಾನು ಇನ್ನು ಶಾಲೆಗಳಲ್ಲಿ ಉಳಿದುಕೊಂಡಿದೆ. ಸದ್ಯ ಶಾಲೆಗಳ ಪುನರಾರಂಭದ ಬಗ್ಗೆ ಸರಕಾರಕ್ಕೆ ಯಾವುದೇ ಸ್ಪಷ್ಟತೆ ಇಲ್ಲದ ಕಾರಣ ಇವುಗಳ ಬಳಕೆ ಅಸಾಧ್ಯ.

 karnataka-akshara.dasoha-project-rice-dhal-school-kmf-milk.powder-use

ಇಂಥ ಹಾಲಿನ ಪುಡಿಯು ಐದಾರು ತಿಂಗಳಲ್ಲೇ ಎಕ್ಸಪೈರಿ ಡೇಟ್ ಮೀರುತ್ತವೆ. ಆದ್ದರಿಂದ ಶಾಲೆಗಳಲ್ಲಿ ಬಾಕಿ ಉಳಿದಿರುವ ಇಂಥ ಹಾಲಿನ ಪುಡಿಯನ್ನು , ಕೋವಿಡ್ 19 ನ ಲಾಕ್ ಡೌನ್ ನಿಂದ ಸಂತ್ರಸ್ಥರಾಗಿರುವ ವ್ಯಕ್ತಿಗಳ ಕುಟುಂಬಗಳಿಗೆ ನೀಡುವ ಮೂಲಕ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ.

ಇದೇ ರೀತಿ ಅಡುಗೆ ಎಣ್ಣೆ ಸಂಗ್ರಹವನ್ನು ಅವಶ್ಯಕ ಕುಟುಂಬಗಳಿಗೆ ಅಥವಾ ಸಮುದಾಯ ಅಡುಗೆ ತಯಾರಿಕೆಗೆ ಬಳಸುವ ಮೂಲಕ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿರುವ ತುರ್ತು ಒದಗಿದೆ.

 

key words : karnataka-akshara.dasoha-project-rice-dhal-school-kmf-milk.powder-use