ಪಾದಾರ್ಪಣೆ ಪಂದ್ಯದಲ್ಲೇ 24 ವರ್ಷಗಳ ದಾಖಲೆ ಮುರಿದ ಕನ್ನಡಿಗ ಪ್ರಸಿದ್ಧ ಕೃಷ್ಣ

Promotion

ಬೆಂಗಳೂರು, ಮಾರ್ಚ್ 24, 2021 (www.justkannada.in): ಕರ್ನಾಟಕ ಮೂಲದ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಪಾದಾರ್ಪಣೆ ಪಂದ್ಯದಲ್ಲೇ ಹೊಸ ದಾಖಲೆ ಮಾಡಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಪ್ರಸಿದ್ಧ ಕೃಷ್ಣ ನಾಲ್ಕು ವಿಕೆಟ್ ಪಡೆಯುವ ಮೂಲಕ ಮಿಂಚಿದರು.

ಒಟ್ಟು ನಾಲ್ಕು ವಿಕೆಟ್ ಕಬಳಿಸಿದ ಪ್ರಸಿದ್ದ 24 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ.

ಅಂದಹಾಗೆ ಚೊಚ್ಚಲ ಪಂದ್ಯದಲ್ಲೇ ಫಾಸ್ಟ್ ಬೌಲರ್ ಮೂರಕ್ಕಿಂತ ಹೆಚ್ಚು ವಿಕೆಟ್ ಗಳಿಸಿದ 24 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.