ಹಂಬಲ್ ಪೊಲಿಟೀಷಿಯನ್ ನೋಗ್‌ರಾಜ್ ವೆಬ್‌ಸೀರಿಸ್ ಟೀಸರ್ ಬಿಡುಗಡೆ

Promotion

 

ಬೆಂಗಳೂರು, ಡಿ.17, 2021 : (www.justkannada.in news ) ಡ್ಯಾನಿಶ್ ಸೇಠ್ ನಟನೆಯ “ಹಂಬಲ್ ಪೊಲಿಟೀಷಿಯನ್ ನೋಗರಾಜ್” ಈ ಸಿನಿಮಾ ಮೂಲಕ ಎಲ್ಲರನ್ನು ರಂಜಿಸಿದ್ದ ಇದೇ ಚಿತ್ರತಂಡ ಈಗ ವೆಬ್‌ಸೀರಿಸ್ ಮೂಲಕ ಮತ್ತೊಮ್ಮೆ ರಂಜಿಸಲು ಬರುತ್ತಿದೆ.

“ಹಂಬಲ್ ಪೊಲಿಟೀಷಿಯನ್ ನೋಗ್‌ರಾಜ್” ವೆಬ್ ಸೀರಿಸ್‌ನ ಮೊದಲ ಟೀಸರ್ ಇಂದು (ಡಿ.17) ಬಿಡುಗಡೆಯಾಗಿದ್ದು, ಜನವರಿ 6ಕ್ಕೆ ಅದ್ಧೂರಿಯಾಗಿ ವೂಟ್ ಸೆಲೆಕ್ಟ್‌ನಲ್ಲಿ ಬಿಡುಗಡೆಯಾಗಲಿದೆ.

ಹಂಬಲ್ ಪೊಲಿಟೀಷಿಯನ್ ನೋಗರಾಜ್ ಕಾಮಿಡಿ ಆಧಾರಿತ ವೆಬ್‌ಸೀರಿಸ್ ಆಗಿದ್ದು, ಒಟ್ಟು 10 ಎಪಿಸೋಡ್ ಹೊಂದಿದೆ. ನಟರಾದ ಪ್ರಕಾಶ್ ಬೆಳಬಾಡಿ, ವಿನಯ್ ಚೆಂಡೂರ್ ಮತ್ತು ದಿಶಾ ಮದನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾದ್‌ಖಾನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಡ್ಯಾನಿಶ್ ಸೇಟ್ ಒಬ್ಬ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸುತ್ತಾ ರಾಜಕೀಯ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ. ನಂತರ ರೆಸಾರ್ಟ್ ರಾಜಕೀಯ, ಮುಖ್ಯಮಂತ್ರಿ ಸ್ಥಾನಕ್ಕೇರಲು ಏನೆಲ್ಲಾ ಸರ್ಕಸ್ ಮಾಡಲಿದ್ದಾರೆ ಹಾಗೂ ಅಧಿಕಾರಿ ದುರಾಸೆ, ಭ್ರಷ್ಟಾಚಾರ ವನ್ನು ವಿಡಂನಾತ್ಮಕವಾಗಿ ತೆಗೆದುಕೊಂಡು ಹೋಗುವ ಮೂಲಕ ರೋಲರ್ ಕೋಸ್ಟರ್ ಆಗಿ ನೋಗರಾಜ್ ಜನರನ್ನು ರಂಜಿಸಲಿದ್ದಾರೆ. 10 ಎಪಿಸೋಡ್‌ನ ಈ ವೆಬ್‌ಸೀರಿಸ್ ಪೂರ್ತಿ ಪಂಚಿಂಗ್ ಡೈಲಾಗ್ ಹಾಗೂ ನಗುವಿಕೆ‌ ಕೊರತೆ ಇಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ.

key words : Kannada-web-series-humble-politician-nograj