ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಕನ್ನಡ ನೆಲದ ಹಕ್ಕಿಯ ಹಾಡು’   ಸಾಕ್ಷ್ಯಚಿತ್ರ ಆಯ್ಕೆ..

Promotion

ಮೈಸೂರು,ಅಕ್ಟೋಬರ್,7,2023(www.justkannada.in): ‘ನೆಲದ ಹಕ್ಕಿಯ ಹಾಡು ಟೀಯೀ… ಟೀ… ವ್ ವಿಟ್‌…’ (An Earthy Ode to Teeyee…Teweet…)’ ಸಾಕ್ಷ್ಯಚಿತ್ರವು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಅಮೇರಿಕಾದ ನ್ಯೂಯಾರ್ಕ್, ಬೊಸಾನ್, ನಪ್ಲೆಸ್‌ ಹಾಗೂ ಮಲೇಷಿಯಾದ ಕೌಲಲಾಂಪೂರ್‌, ಚೀನಾದ ಯಾಆ್ಯನ್ ನಗರದಲ್ಲಿ ಪ್ರದರ್ಶನಗೊಳ್ಳಲಿದೆ. ಮೈಸೂರಿನ ಹೊರವಲಯ ರವೀಂದ್ರನಾಥ ಟ್ಯಾಗೂರ್‌ ನಗರದಲ್ಲಿ ಈ ಚಿತ್ರವನ್ನು ವನ್ಯಜೀವಿ ಛಾಯಾಗ್ರಾಹಕ ಡಾ.ಲೋಕೇಶ್‌ ಮೊಸಳೆ ಚಿತ್ರಿಸಿದ್ದಾರೆ.

ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಅಕ್ಟೋಬರ್ 19 ರಿಂದ 29ರವರೆಗೆ ನಡೆಯಲಿರುವ Wildlife conservation film festival ನಲ್ಲಿ ಪ್ರದರ್ಶನಗೊಳ್ಳಲಿದೆ.

ಅಮೇರಿಕಾದ ಬೊಸ್ಟಾನ್ (Boston) ನಗರದ ಪರ್ಲ್ ಸ್ಟ್ರೀಟ್ ಸ್ಕ್ರಿನಿಂಗ್ ರೂಮ್‌ ನಲ್ಲಿ ನವೆಂಬರ್ 13 ರಿಂದ 15ರ ವರೆಗೆ ನಡೆಯುವ ಚಿತ್ರೋತ್ಸವದಲ್ಲಿ ‘ನೆಲದ ಹಕ್ಕಿಯ ಹಾಡು’ ಪ್ರದರ್ಶನವಿದೆ.

ಫ್ಲೋರಿಡಾದ ನಪ್ಲೇಸ್ ನಗರದಲ್ಲಿರುವ Rookery Bay Environmental Education Center ನಲ್ಲಿ 2024ರ ಜನವರಿ 16 ರಿಂದ 23ರ ವರೆಗೆ ನಡೆಯುವ ಪ್ರದರ್ಶನಗಳಿಗೆ ಆಹ್ವಾನ ನೀಡಲಾಗಿದ್ದು, ಪ್ರದರ್ಶನದ ನಂತರ ನಡೆಯುವ ಪ್ರಶೋತ್ತರ-ಚರ್ಚೆ-ಸಂವಾದಗಳೊಂದಿಗೆ ಕೊನೆಯ ಎರಡು ದಿನಗಳು ವಿಶ್ವ ಪ್ರಸಿದ್ಧ ನಿಸರ್ಗ ತಾಣಗಳಾದ  Everglades National Park, Ten Thousand Island, Tigertail Beach ಮುಂತಾದ ಸ್ಥಳಗಳಿಗೆ ಆಯ್ದ ಚಿತ್ರ ನಿರ್ದೇಶಕರುಗಳಿಗೆ ಪ್ರವಾಸ ಏರ್ಪಡಿಸಲಾಗಿದೆ.

15ನೇ ಅಂತರಾಷ್ಟ್ರೀಯ ಕೌಲಲಾಮ್ ಪುರ್   ಇಕೋ ಫಿಲಂ ಫೆಸ್ಟಿವಲ್’ ಅಕ್ಟೋಬರ್ 19 ರಿಂದ 26ರ ವರೆಗೂ ನಡೆಯಲಿದ್ದು ಮಲೇಷಿಯ ಸರ್ಕಾರದ N.F.D.C.ಈ ಚಿತ್ರೋತ್ಸವದ ನೇತೃತ್ವ ವಹಿಸಿದೆ.

ಚೀನಾ ದೇಶದ ಯಾಆ್ಯನ್ ನಗರದಲ್ಲಿ ಅಕ್ಟೋಬರ್ 21 ರಿಂದ 27ರ ವರೆಗೆ ನಡೆಯುತ್ತಿರುವ ಅಂತರಾಷ್ಟ್ರೀಯ ಗ್ರೀನ್ ಫಿಲಂ ವೀಕ್‌ ಗೆ ‘ಹಕ್ಕಿಯ ನೆಲದ ಹಾಡು’ ಚಿತ್ರವು ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಚೀನಾ ಸರ್ಕಾರದ  State Administration of Press Public Relation Radio Film and Television ಸಹಯೋಗದಲ್ಲಿ ಈ ಚಿತ್ರೋತ್ಸವ ನಡೆಯಲಿದೆ. ಪ್ರತಿಷ್ಠಿತ ಈ ಚಿತ್ರೋತ್ಸವವನ್ನು “ಯಾ’ ಆ್ಯನ್ ಜೈಂಟ್ ಪಾಂಡ ಆಂಡ್ ನೇಚರ್ ಫಿಲಂ ವೀಕ್ (Ya’an Giant Ponda and Nature Film Week) ಎಂದು ಖ್ಯಾತಗೊಂಡಿದೆ.

ನಗರೀಕರಣದ ಒತ್ತಡದಿಂದಾಗಿ ವನ್ಯಜೀವಿಗಳ ಬದುಕು ಹೋರಾಟದ ಕಥೆಯನ್ನು ನೆಲದ ಹಕ್ಕಿಯ ಹಾಡು’ ಪ್ರಸ್ತುತಪಡಿಸಲಿದ್ದು ; ಸಕಲ ಜೀವಿಗಳ ಬದುಕಿನ ಸೂಕ್ಷ್ಮತೆಯನ್ನು ಅರಿಯಲು ಈ ಸಾಕ್ಷ್ಯಚಿತ್ರ ಪ್ರೇರೇಪಿಸುವಂತಿದೆ.

ಅನೇಕ ವನ್ಯಜೀವಿಗಳ ದುರಂತ ಬದುಕಿಗೆ ಸಾಕ್ಷಿಯಂತಿರುವ ಈ ಚಿತ್ರ ಮೈಸೂರು ಹೊಸ ಬಡಾವಣೆಯ ವನ್ಯಜೀವಿಗಳ ಸಮಸ್ಯೆಯಾಗಿ ಮಾತ್ರ ಉಳಿದಿಲ್ಲ. ಇದು ವಿಶ್ವದ ಹೊಸಹೊಸ ಬಡಾವಣೆಯ ವನ್ಯಜೀವಿಗಳ ಸಮಸ್ಯೆಯಾಗಿರುವುದನ್ನು ಈ ಚಿತ್ರ ಹೇಳುತ್ತಿದೆ.

ಕನ್ನಡ ಭಾಷೆಯ ಈ ಚಿತ್ರವನ್ನು ಡಾ. ಲೋಕೇಶ್ ಮೊಸಳೆ ರೂಪಿಸಿದ್ದು ಸ್ಕ್ರಿಪ್ಟ್ ಮತ್ತು ಸಿನಿಮಾಟೊಗ್ರಫಿ ಮಾಡಿದ್ದರೆ, ಸಂಕಲನ- ಎಂ.ಎನ್. ಸ್ವಾಮಿ, ಶಬ್ದವಿನ್ಯಾಸ- ಬಾಬು ಈಶ್ವರ್ ಪ್ರಸಾದ್, ಚಿತ್ರಕಥಾ ನಿರೂಪಣೆ- ಕೆ.ಟಿ. ಕೃಷ್ಣಕಾಂತ್, ಉಪಶೀರ್ಷಿಕೆ- ಕವಿ ಕಮಲಾಕರ ಭಟ್, ಕವಿತೆ ನುಡಿರಾಗ- ಪಿಚ್ಚಳ್ಳಿ ಶ್ರೀನಿವಾಸ್‌ ಗೋಪಾಲಕೃಷ್ಣ ಅಡಿಗರ ‘ಭೂಮಿಗೀತ’ ಕವನದ ಸಾಲುಗಳನ್ನು ಚಿತ್ರದಲ್ಲಿ ಬಳಸಲಾಗಿದೆ.

ಮೈಸೂರಿನ ಗ್ರಾವಿಟಿ ಒನ್‌ ಪ್ರಸ್ತುತ ಪಡಿಸಿದ ಈ ಚಿತ್ರವನ್ನು ಧನಂಜಯ್‌ ಬಸವರಾಜ್, ನಂದೀಶ್‌ ಬಿಳಿಕೆರೆ ನಿರ್ಮಿಸಿದ್ದಾರೆ. ಮೈಸೂರಿನ ದಸರಾ ಚಲನ ಚಿತ್ರೋತ್ಸವದಲ್ಲಿ ‘ನೆಲದ ಹಕ್ಕಿಯ ಹಾಡು’ ಮಾಲ್ ಆಫ್‌ ಮೈಸೂರ್‌ ನ ಏನಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನ ನಡೆಯಲಿದೆ.

Key words: kannada nelada hakkiya hadu – selected – International- Film- Festival..