ಖಾಸಗಿ ಸಂಸ್ಥೆಗಳಿಂದ  ಕನ್ನಡ ನಿರ್ಲಕ್ಷ್ಯ- ಟಿ.ಎಸ್ ನಾಗಾಭರಣ ಆಕ್ರೋಶ…

ಬೆಂಗಳೂರು,ಏಪ್ರಿಲ್,26,2021(www.justkannada.in):  ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೆ ಪ್ರಾಧಿಕಾರದ ಫೇಸ್ಬುಕ್, ಟ್ವಿಟರ್ ಅಧಿಕೃತ ಖಾತೆಗೆ ಟ್ಯಾಗ್ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು ಹೇಳಿದರು.

ಕಳೆದ ಮೂರು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಗ್ರಾಹಕ ಸೇವೆಯಲ್ಲಿ ಕನ್ನಡ ಟ್ವಿಟರ್ ಫೇಸ್ಬುಕ್ ಹ್ಯಾಷ್ ಟ್ಯಾಗ್ ಅಭಿಯಾನದ ಸಮಾರೋಪ ಕುರಿತು ಜಾಲತಾಣ ಸಭೆಯಲ್ಲಿ ಮಾತನಾಡಿದ  ಟಿ.ಎಸ್ ನಾಗಾಭರಣ, ಕರ್ನಾಟಕದಲ್ಲಿರುವ ನೂರಾರು ಖಾಸಗಿ ಸಂಸ್ಥೆಗಳು, ಕೆಲವು ಸರ್ಕಾರಿ ಕಚೇರಿಗಳು ಕನ್ನಡವನ್ನು ಕಡೆಗಣಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರಕ್ಕೆ ನಿರಂತರವಾಗಿ ದೂರುಗಳು ದಾಖಲಾಗುತ್ತಿವೆ ಈ ಹಿನ್ನೆಲೆಯಲ್ಲಿ ವಿನೂತನವಾಗಿ ಫೇಸ್ಬುಕ್ ಟ್ವಿಟರ್ ಹ್ಯಾಷ್ ಟ್ಯಾಗ್ ಅಭಿಮಾನವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.jk

ಕರ್ನಾಟಕದಲ್ಲಿರುವ ಯಾವುದೇ ಖಾಸಗಿ ಸಂಸ್ಥೆಗಳು ರಾಜ್ಯ  ಭಾಷಾನೀತಿಯನ್ನು ಅನುಸರಿಸುವುದು ಅವರ ಕರ್ತವ್ಯವಾಗಿದೆ ಇಲ್ಲಿನ ನೆಲ ಜಲ ಬಳಸಿಕೊಂಡು ಖಾಸಗಿ ಸಂಸ್ಥೆಗಳು ಭಾಷಾನೀತಿಯನ್ನು ಉಲ್ಲಂಘಿಸುತ್ತಿರುವುದು ಸರಿಯಾದ ಕ್ರಮವಲ್ಲ.  ಖಾಸಗಿ ಸಂಸ್ಥೆಗಳಿಗೆ ಭೂಮಿಯನ್ನು ನೀಡುವಾಗ ರಾಜ್ಯ ಭಾಷಾ ನೀತಿಯನ್ನು ಕಡ್ಡಾಯವಾಗಿ ಅನುಸರಿಸುವಂತೆ ಮುಚ್ಚಳಿಕೆಯನ್ನು ಬರೆಸಿಕೊಳ್ಳಲಾಗಿರುತ್ತದೆ. ಭೂಮಿಯನ್ನು ಪಡೆಯುವಾಗ ಎಲ್ಲಾ ನಿಯಮಗಳಿಗೂ ಒಪ್ಪಿ,  ನಂತರದ ದಿನಗಳಲ್ಲಿ ಕಡೆಗಣಿಸುವುದನ್ನು ಪ್ರಾಧಿಕಾರ ಖಂಡಿಸುವುದಾಗಿ ನಾಗಾಭರಣ ಅವರು ಹೇಳಿದರು.

ಡಿಟಿಎಚ್ ಸೇವೆ ನೀಡುವ ಸನ್ ಡೈರೆಕ್ಟ್, ಟಾಟಾ ಸ್ಕೈ, ರಿಲಯನ್ಸ್ ಸೇರಿದಂತೆ ಹಲವು ಸಂಸ್ಥೆಗಳು. ಇಂಡಿಗೋ ಏರ್ಲೈನ್ಸ್, ಔಷಧಿ ತಯಾರಿಕಾ ಸಂಸ್ಥೆಗಳು, ಅಂಚೆ ಕಚೇರಿ, ಎಲ್ಐಸಿ ಸಂಸ್ಥೆಗಳು. ಅನಿಲ ಸಂಸ್ಥೆಗಳಾದ ಇಂಡಿಯನ್, ಹೆಚ್ ಪಿ, ಭಾರತ್ ಗ್ಯಾಸ್ ಸಂಸ್ಥೆಗಳು.

ಬಿಗ್ ಬಜಾರ್, ಮಾಲ್ ಗಳು, ಅಮೆಜಾನ್,  ಫ್ಲಿಪ್ಕಾರ್ಟ್ ಸೇರಿದಂತೆ ಹಲವಾರು ಖಾಸಗಿ ಸಂಸ್ಥೆಗಳು. ಹಾಗೂ ಸರ್ಕಾರಿ ಸಂಸ್ಥೆಗಳಾದ ಬಿಬಿಎಂಪಿ ಸಹಾಯವಾಣಿಯನ್ನು ಕನ್ನಡದಲ್ಲಿ ನೀಡಬೇಕು ಹಾಗೂ ಕೊರೋನ ಕುರಿತ ಎಲ್ಲಾ ಮಾಹಿತಿಗಳನ್ನು ಆರೋಗ್ಯ ಇಲಾಖೆಯು ಕನ್ನಡದಲ್ಲಿ ನೀಡುವಂತೆ ಆಯಾ ಸಂಸ್ಥೆಯ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿ ಒತ್ತಾಯಿಸಲಾಯಿತು.

ಹೀಗೆ ಹ್ಯಾಷ್ ಟ್ಯಾಗ್ ಅಭಿಯಾನದ ಮೂಲಕ ಒಮ್ಮೆಗೆ  ಹಲವಾರು ಸಂಸ್ಥೆಗಳ ವಿರುದ್ಧ ನೂರಾರು ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿ  ಆಯಾ ಸಂಸ್ಥೆಯ ಗಮನಕ್ಕೆ ತರಲಾಗಿದೆ. ಇಂತಹ ಒಂದು ಅಭೂತಪೂರ್ವ ಕಾರ್ಯದಲ್ಲಿ ಪಾಲ್ಗೊಂಡ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ಅಧ್ಯಕ್ಷರು ಹೇಳಿದರು.kannada-neglect-private-institutions-ts-nagabarana-outrage

ಪ್ರಾಧಿಕಾರವು ಹಮ್ಮಿಕೊಂಡಿದ್ದ ವಿನೂತನ ಹ್ಯಾಷ್ ಟ್ಯಾಗ್ ಅಭಿಯಾನದಲ್ಲಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ, ನಾಮನಿರ್ದೇಶಿತ ಸದಸ್ಯರುಗಳು, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರುಗಳು, ಮಹಾನಗರಪಾಲಿಕೆಯ ಕನ್ನಡ ಜಾಗೃತಿ ಸಮಿತಿ ಸದಸ್ಯರುಗಳು, ವಿಧಾನಸಭಾ ಕ್ಷೇತ್ರದ ಜಾಗೃತಿ ಸಮಿತಿ ಸದಸ್ಯರುಗಳು, ಕನ್ನಡ ಕಾಯಕ ಪಡೆಯ ಸದಸ್ಯರುಗಳು ಹಾಗೂ ಗ್ರಾಹಕರ ವೇದಿಕೆಯ ಸದಸ್ಯರುಗಳು, ಕನ್ನಡ ಪರಿಚಾರಕರು ಕನ್ನಡ ಪರ ಹೋರಾಟಗಾರರು, ಕನ್ನಡ ಮನಸ್ಸುಗಳು ಪಾಲ್ಗೊಂಡಿದ್ದರು.

Key words: Kannada -neglect –private- institutions-TS Nagabarana -Outrage.