ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ‘ರಂಗನಾಯಕಿ’

Promotion

ಬೆಂಗಳೂರು, ಅಕ್ಟೋಬರ್ 10, 2019 (www.justkannada.in): ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ ‘ರಂಗನಾಯಕಿ’ ಚಿತ್ರ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಈ ಚಲನ ಚಿತ್ರೋತ್ಸವಕ್ಕೆ ವಿಶ್ವ ಮಟ್ಟದಲ್ಲಿ ಗೌರವವಿದೆ. ಈ ಬಾರಿ ಅದಕ್ಕೆ ಐವತ್ತು ವರ್ಷಗಳ ಸಂಭ್ರಮ. ಈ ಚಲನಚಿತ್ರೋತ್ಸವದ ಸ್ಪರ್ಧೆಯಲ್ಲಿ ಪಾಲ್ಗೊಳ್ಳೋದೇ ಪ್ರತಿಷ್ಠೆಯ ವಿಚಾರ. ಈ ಹೆಗ್ಗಳಿಕೆಗೆ ರಂಗನಾಯಕಿ ಚಿತ್ರ ಪಾತ್ರವಾಗಿದೆ.

ಅಂದಹಾಗೆ ನವೆಂಬರ್ ಒಂದರಂದು ‘ರಂಗನಾಯಕಿ’ ತೆರೆಗಾಣಲು ಮುಹೂರ್ತ ನಿಗದಿಯಾಗಿದೆ. ಇದೇ ಸಂದರ್ಭದಲ್ಲಿ ಸದರಿ ಸಿನಿಮಾ ಕನ್ನಡದ ಘನತೆಯನ್ನು ಎತ್ತಿ ಹಿಡಿಯುವಂಥಾ ಗರಿಮೆಯೊಂದನ್ನು ತನ್ನದಾಗಿಸಿಕೊಂಡಿದೆ. ಈಗಾಗಲೇ ಬಹು ನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿದೆ.
ನವೆಂಬರ್ ಒಂದರಂದು ‘ರಂಗನಾಯಕಿ’ ತೆರೆಗಾಣಲು ಮುಹೂರ್ತ ನಿಗದಿಯಾಗಿದೆ.
ಇದೇ ಸಂದರ್ಭದಲ್ಲಿ ಸದರಿ ಸಿನಿಮಾ ಕನ್ನಡದ ಘನತೆಯನ್ನು ಎತ್ತಿ ಹಿಡಿಯುವಂಥಾ ಗರಿಮೆಯೊಂದನ್ನು ತನ್ನದಾಗಿಸಿಕೊಂಡಿದೆ. ದಯಾಳ್ ಪದ್ಮನಾಭನ್ ಚಿತ್ರದ ನಿರ್ದೇಶಕ.