ಪರಭಾಷಾ ಚಿತ್ರಗಳ ಹಾವಳಿ: ಕನ್ನಡದ ‘ಓಲ್ಡ್ ಮಾಂಕ್’ಗೆ ಸಿಗುತ್ತಿಲ್ಲ ಥಿಯೇಟರ್’ಗಳು !

Promotion

ಬೆಂಗಳೂರು, ಮಾರ್ಚ್ 05, 2022 (www.justkannada.in): ಶ್ರೀನಿ ನಟನೆ ಹಾಗೂ ನಿರ್ದೇಶನದ ‘ಓಲ್ಡ್ ಮಾಂಕ್’ ಚಿತ್ರ ತಂಡಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ.

ಸಿನಿಮಾ ನೋಡಲು ಪ್ರೇಕ್ಷಕರು ಬಯಸಿದರೂ ಕೂಡ, ಅವರಿಗೆ ಸಿನಿಮಾ ತೋರಿಸಲು ಸಾಧ್ಯ ಆಗುತ್ತಿಲ್ಲ ಎಂದು ಚಿತ್ರದ ನಟ ಶ್ರೀನಿ ಅಳಲು ತೋಡಿಕೊಂಡಿದ್ದಾರೆ.

ಕರ್ನಾಟಕದ ಹಲವೆಡೆ ಈ ಚಿತ್ರಕ್ಕೆ ಥಿಯೇಟರ್ ಸಿಗುತ್ತಿಲ್ಲ. ‘ಓಲ್ಡ್ ಮಾಂಕ್’ ಥಿಯೇಟರ್ ಕೊರತೆ ಎದುರಿಸುತ್ತಿದೆ ಎಂದು ನಟ ಶ್ರೀನಿ ಬೇಸರಗೊಂಡಿದ್ದಾರೆ.

ಬೇಡಿಕೆ ಇರುವ ಜಾಗಗಳಲ್ಲಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಪ್ರದರ್ಶನ ಮಾಡಬೇಕಿದೆ. ಇದಕ್ಕಾಗಿ ಚಿತ್ರತಂಡ ಹರಸಾಹಸ ಮಾಡುತ್ತಿದೆ. ಆದರೆ ಪರಭಾಷೆ ಚಿತ್ರಗಳಿಗೆ ಥಿಯೇಟರ್ ನೀಡಿರುವ ಕಾರಣಕ್ಕೆ ಕನ್ನಡದ ಈ ಚಿತ್ರಕ್ಕೆ ಸುಲಭವಾಗಿ ಚಿತ್ರಮಂದಿರಗಳು ದೊರೆಯುತ್ತಿಲ್ಲವಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಚಿತ್ರಕ್ಕೆ ಆಗುತ್ತಿರವ ತೊಂದರೆಯನ್ನು ಶ್ರೀನಿ ವಿವರಿಸಿದ್ದಾರೆ.