ಕನ್ನಡದ ‘ಕವಲುದಾರಿ’ ತಮಿಳಿನಲ್ಲಿ ‘ಕಬಡದಾರಿ’

Promotion

ಬೆಂಗಳೂರು, ಅಕ್ಟೋಬರ್ 25, 2019 (www.justkannada.in): ರಿಷಿ ಅಭಿನಯದ ‘ಕವಲುದಾರಿ’ ಸಿನಿಮಾ ತಮಿಳಿನಲ್ಲಿ ‘ಕಬಡದಾರಿ’ ಹೆಸರಿನಲ್ಲಿ ರೀಮೇಕ್ ಆಗುತ್ತಿದೆ.

ಕನ್ನಡದಲ್ಲಿ ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದರು. ರಿಷಿ, ಅನಂತ್​ನಾಗ್, ರೋಷ್ನಿ ಪ್ರಕಾಶ್ ಹಾಗೂ ಇನ್ನಿತರರು ಚಿತ್ರದ ಪ್ರಮುಖ ತಾರಾಗಣದಲ್ಲಿ ನಟಿಸಿದ್ದರು.

ಇದೀಗ ತಮಿಳಿನಲ್ಲಿ ಈ ಚಿತ್ರವನ್ನು ಕ್ರಿಯೇಟಿವ್ ಎಂಟರ್​​ಟೈನರ್ಸ್​ ಬ್ಯಾನರ್ ಅಡಿ ಲಲಿತಾ ಧನಂಜಯನ್ ನಿರ್ಮಿಸುತ್ತಿದ್ದು, ಪ್ರದೀಪ್ ಕೃಷ್ಣಮೂರ್ತಿ ಆಯಕ್ಷನ್ ಕಟ್ ಹೇಳುತ್ತಿದ್ದಾರೆ. ರಿಷಿ ನಟಿಸಿದ್ದ ಪಾತ್ರವನ್ನು ತಮಿಳಿನಲ್ಲಿ ನಟ ಸಿಬಿರಾಜ್ ನಿಭಾಯಿಸುತ್ತಿದ್ದಾರೆ.