ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕನ್ನಡ ಭಾಷೆಗೆ ಯಾವುದೇ ಧಕ್ಕೆಯಾಗಲ್ಲ- ಟಿ.ಎಸ್ ನಾಗಾಭರಣ.

ಮೈಸೂರು,ಜುಲೈ,12,2022(www.justkannada.in): ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕನ್ನಡ ಭಾಷೆಗೆ ಯಾವುದೇ ಧಕ್ಕೆಯಾಗಲ್ಲ ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ, ಕೇಂದ್ರ ಸರ್ಕಾರದ ಹೊಸ ರಾಷ್ಟ್ರೀಯ ನೀತಿಯಿಂದ ಕನ್ನಡದ ಬೆಳವಣಿಗೆಗೆ ಹತ್ತು ಹಲವು ಆಯಾಮಗಳು ಸಿಗಲಿದೆ. ಕನ್ನಡದ ಬೆಳವಣಿಗೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನ ಬಹುತೇಕ ಬಳಕೆಯಾಗುತ್ತಿದೆ. ಬಳಕೆಯಾಗದೇ ಇರುವ ಇಲಾಖೆಗಳಿಗೆ ಬಳಕೆ ಮಾಡುವಂತೆ ಸಲಹೆ ಸೂಚನೆ ನೀಡಲಾಗುತ್ತಿದೆ ಎಂದರು.kannada-neglect-private-institutions-ts-nagabarana-outrage

ಭವಿಷ್ಯದ ಕನ್ನಡದ ಬೆಳವಣಿಗೆಗೆ ತಂತ್ರಾಂಶದ ಅಗತ್ಯತೆಯಿದೆ. ಈ ಮುಖಾಂತರವೇ ಮಕ್ಕಳಿಗೆ ಮೊಬೈಲ್ ಗಳ ಮುಖಾಂತರ ಕನ್ನಡ ಕಲಿಸುವ ಕೆಲಸ ಮಾಡಲಾಗುತ್ತದೆ.  ಕನ್ನಡ ಪ್ರಾಧಿಕಾರದ ಹೊಸ ಆ್ಯಪ್ ನಲ್ಲಿ 4 ಲಕ್ಷ ಪದಗಳಿವೆ. ಐವತ್ತೆಂಟು ಡಿಕ್ಷನರಿಗಳನ್ನು ಒಳಗೊಂಡಿರುವ ಆ್ಯಪ್. ಇದನ್ನು ಡೌನ್ ಲೋಡ್ ಮಾಡಿಕೊಂಡು ಉಪಯೋಗಿಸಿದರೆ ಕನ್ನಡ ಆಡಳಿತಾತ್ಮಕವಾಗಿ ಬಳಕೆ ಸುಲಭ. ವ್ಯಾಪಾರಿಗಳ ಕೂಡಾ ಹೆಚ್ಚಾಗಿ ಕನ್ನಡ ಬಳಕೆ ಮಾಡಬೇಕು.  ಕನ್ನಡದಲ್ಲೇ ವ್ಯವಹಾರ-ವಹಿವಾಟು ಹೆಚ್ಚಿಸಲು ಕ್ರಮ ವಹಿಸಿದ್ದೇವೆ ಎಂದು ಟಿ.ಎಸ್ ನಾಗಾಭರಣ ತಿಳಿಸಿದರು.

Key words:Kannada language – not affected – NEP-TS Nagabharana