ಸಿನಿಮಾ ಮಂದಿ ಈ ಸಂಘಗಳಲ್ಲಿ ಕನಿಷ್ಟ 10 ವರ್ಷ ಸದಸ್ಯತ್ವ ಹೊಂದಿದ್ರೆ ಆರ್ಥಿಕ ನೆರವು.

 

ಬೆಂಗಳೂರು, ಮೇ 28, 2020 : (www.justkannada.in news) : ಕರ್ನಾಟಕ ಸರ್ಕಾರವು, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಯೋಗದೊಂದಿಗೆ, ಕರ್ನಾಟಕ ರಾಜ್ಯದ ಚಲನಚಿತ್ರ ಕಾರ್ಮಿಕರ, ತಂತ್ರಜ್ಞರ ಹಾಗೂ ಕಲಾವಿದರ ಕಲ್ಯಾಣ ನಿಧಿ ‘ ದತ್ತಿ ನಿಧಿ ‘ ಯನ್ನು ಜಾರಿಗೆ ತಂದಿದೆ.

ಇದರ ಪ್ರಕಾರ, ಆರೋಗ್ಯ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿರುವ, ಕರ್ನಾಟಕ ರಾಜ್ಯದ ಚಲನಚಿತ್ರ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರು, ದತ್ತಿ ನಿಧಿಯಿಂದ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ತಿಳಿಸಿದ್ದಾರೆ.

ಇದಕ್ಕೆ ಅರ್ಜಿ ಸಲ್ಲಿಸುವವರು ಈ ಕೆಳಕಂಡ ಸಂಘಗಳಲ್ಲಿ ನೋಂದಣಿಯಾಗಿರುವ ಸದಸ್ಯರಾಗಿದ್ದು, ಈ ಕೆಳಕಂಡ ಸಂಘಗಳಲ್ಲಿ ಕನಿಷ್ಟ 10 ವರ್ಷ ಸದಸ್ಯತ್ವ ಹೊಂದಿರಬೇಕು.
1. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.
2. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ.
3. ಕರ್ನಾಟಕ ಚಲನಚಿತ್ರ ಸಂಕಲನಕಾರರ ಸಂಘ
4. ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘ
5. ಕರ್ನಾಟಕ ಚಲನಚಿತ್ರ ಸಂಗೀತ ನಿರ್ದೇಶಕರ ಸಂಘ
6. ಕರ್ನಾಟಕ ಚಲನಚಿತ್ರ ಬರಹಗಾರರ ಸಂಘ
7. ಕರ್ನಾಟಕ ಚಲನಚಿತ್ರ ಸಂಗೀತಗಾರರ ಸಂಘ
ಜೊತೆಗೆ, ಕರ್ನಾಟಕ ಕಲಾವಿದರು ಮತ್ತು ಕಾರ್ಮಿಕರ ಒಕ್ಕೂಟದ,
1. ಕರ್ನಾಟಕ ಚಲನಚಿತ್ರ ನಿರ್ಮಾಣ ನಿರ್ವಾಹಕರ ಸಂಘ
2. ಕರ್ನಾಟಕ ಚಲನಚಿತ್ರ ನಿರ್ಮಾಣ ಸಹಾಯಕರ ಸಂಘ
3. ಕರ್ನಾಟಕ ಚಲನಚಿತ್ರ ಕಲಾ ನಿರ್ದೇಶಕರು ಹಾಗೂ ಸಹ ಕಲಾ ನಿರ್ದೇಶಕರ ಸಂಘ
4. ಕರ್ನಾಟಕ ಚಲನಚಿತ್ರ ಚಾಲಕರ ಸಂಘ
5. ಕರ್ನಾಟಕ ಚಲನಚಿತ್ರ ಕಾರ್ಪೆಂಟರ್ ಸಂಘ
6. ಕರ್ನಾಟಕ ಚಲನಚಿತ್ರ ಡಬ್ಬಿಂಗ್ ಕಲಾವಿದರ ಸಂಘ
7. ಕರ್ನಾಟಕ ಚಲನಚಿತ್ರ ವಸ್ತ್ರಾಲಂಕಾರ ಸಂಘ
8. ಕರ್ನಾಟಕ ಚಲನಚಿತ್ರ ವರ್ಣಾಲಂಕರ ಸಂಘ
9. ಕರ್ನಾಟಕ ಚಲನಚಿತ್ರ ಸಾಹಸ ನಿರ್ದೇಶಕರು ಮತ್ತು ಸಾಹಸ ಕಲಾವಿದರ ಸಂಘ
10. ಕರ್ನಾಟಕ ಚಲನಚಿತ್ರ ಸ್ಥಿರ ಛಾಯಾಗ್ರಾಹಕರ ಸಂಘ
11. ಕರ್ನಾಟಕ ಚಲನಚಿತ್ರ ಲೈಟ್ ಮೆನ್ ಸಂಘ
12. ಕರ್ನಾಟಕ ಚಲನಚಿತ್ರ ಕ್ಯಾಮೆರ ನಾಗರ ಸಂಘ
13. ಕರ್ನಾಟಕ ಚಲನಚಿತ್ರ ಸಹಾಯಕ ನಿರ್ದೇಶಕರ ಸಂಘ
14. ಕರ್ನಾಟಕ ಚಲನಚಿತ್ರ ಸಹ ಕಲಾವಿದರ ಸಂಘ (ಮೈಸೂರು)
15. ಕರ್ನಾಟಕ ಚಲನಚಿತ್ರ ಪೈಂಟರ್ ಸಂಘ
16. ಕರ್ನಾಟಕ ಚಲನಚಿತ್ರ ಪೋಷಕ ನಟರ ಸಂಘ.

kannada-film-industry-persons-get-financial-aid-by-state-government

ಗಮನಿಸಬೇಕಾದ ವಿಷಯ:

ಆರ್ಥಿಕ ನೆರವು, ಅಕಾಲಿಕ ಮರಣ, ಕ್ಯಾನ್ಸರ್, ಹೃದಯಕ್ಕೆ ಸಂಭಂದಿಸಿದ ಕಾಯಿಲೆಗಳು, ಅಪಘಾತ, ಮೂತ್ರಪಿಂಡ ಕ್ಕೆ ಸಂಭಂದಿಸಿದ ರೋಗಗಳು, ದೀರ್ಘ ಕಾಲದ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ, ಮಾತ್ರ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.
ಆರ್ಥಿಕ ನೆರವು ಕೋರಿ ಸಲ್ಲಿಸುವ ಅರ್ಜಿಯನ್ನು, ಪ್ರಕರಣದ ಸಮಯ ಸಂದರ್ಭದ ಗಂಭೀರತೆ ಹಾಗೂ ತೀವ್ರತೆಯನ್ನು ಆಧರಿಸಿ ದತ್ತಿ ಸಭೆಯು ನಿರ್ಣಯವನ್ನು ತೆಗೆದುಕೊಳ್ಳುವುದು.

ಸಂಕಷ್ಟದಲ್ಲಿರುವ ಕಲಾವಿದರು, ಕಾರ್ಮಿಕರು ಹಾಗೂ ತಂತ್ರಜ್ಞರು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಅರ್ಜಿಯನ್ನು ಸಲ್ಲಿಸಿ, ಈ ದತ್ತಿ ನಿಧಿಯ ಉಪಯೋಗವನ್ನು ಪಡೆದುಕೊಳ್ಳಬಹುದು.

oo

key words : kannada-film-industry-persons-get-financial-aid-by-state-government