ಕಂಬಳಿ ಹಾಕಿದ ತಕ್ಷಣ ಆ ಗೌರವ ಬಂದು ಬಿಡುತ್ತಾ ?- ಸಿಎಂ ಬೊಮ್ಮಾಯಿಗೆ ಸಿದ್ಧರಾಮಯ್ಯ ಟಾಂಗ್.

Promotion

ಬೆಂಗಳೂರು,ಅಕ್ಟೋಬರ್,26,2021(www.justkannada.in): ಕಂಬಳಿ ಹಾಕಿಕೊಂಡು ಸಿಎಂ ಬಸವರಾಜ ಬೊಮ್ಮಾಯಿ ವೋಟ್ ಕೇಳಿದ್ದಾರೆ. ಇವರು ಕಂಬಳಿ ಹಾಕಿಕೊಂಡ ತಕ್ಷಣ ಆ ಗೌರವ ಬರುತ್ತಾ..? ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟಾಂಗ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಿದ್ಧರಾಮಯ್ಯ, ಕಂಬಳಿ ನೇಯುವವರು ಯಾರು ? ಕುರುಬರು ತಾನೆ ? ಮುಖ್ಯಮಂತ್ರಿ ಬೊಮ್ಮಾಯಿ ಅವರ ಜಾತಿಯವರು ನೇಯುತ್ತಾರಾ ? ಅಂದ ಮೇಲೆ ಆ ಗೌರವ ಶ್ರಮ ಯಾರಿಗೆ ಸೇರುತ್ತೆ, ಕುರುಬರಿಗೆ ಅಲ್ವಾ ? ಕಂಬಳಿ ಹಾಕಿದ ತಕ್ಷಣ ಆ ಗೌರವ ಬಂದು ಬಿಡುತ್ತಾ ? ಎಂದು ಸಿಎಂ ಬೊಮ್ಮಾಯಿ ಅವರನ್ನ ಕುಟುಕಿದರು

ಸಿದ್ದರಾಮಯ್ಯ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಸಿದ್ಧರಾಮಯ್ಯ,  ಜಾತಿ ಹುಟ್ಟುಹಾಕಿದ್ದು ಮನುಸ್ಮೃತಿಗಳು, ಮನುವಾದಿಗಳು. ಹೀಗಿರುವಾಗ ಅವರು ನಮಗೆ ಪಾಠ ಹೇಳಿಕೊಡಬೇಕೇ ಎಂದು ಪ್ರಶ್ನಿಸಿದರು.

ಚಾತುರ್ವರ್ಣ ವ್ಯವಸ್ಥೆ, ಶ್ರೇಣಿ ವ್ಯವಸ್ಥೆ ಹುಟ್ಟುಹಾಕಿದ್ದು ಯಾರು ? ಅದನ್ನು ಪ್ರತಿಪಾದನೆ ಮಾಡುತ್ತಿರುವವರು ಯಾರು ? ಜಾತಿ ಹುಟ್ಟುಹಾಕಿದ್ದು ಮನುವಾದಿಗಳು, ಮನುವಾದಿಗಳು ಅಂದ್ರೆ ಯಾರು ? ಬಿಜೆಪಿಯವರು. ಅವರಿಂದ ಪಾಠ ಕಲಿಯಬೇಕಿಲ್ಲ ಎಂದರು.

ಇದೇ ವೇಳೆ ಜೆಡಿಎಸ್ ವಿರುದ್ದವೂ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ, ಜೆಡಿಎಸ್ ಒಂದು ಕುಟುಂಬ ರಾಜಕಾರಣ ಪಾರ್ಟಿ. ಅವರ ಕುಟುಂಬದವರೆಲ್ಲಾ ರಾಜಕಾರಣದಲ್ಲಿದ್ದಾರೆ. ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ ಹೆಚ್,ಡಿ ಕುಮಾರಸ್ವಾಮಿ ಪಕ್ಷದಲ್ಲೇ ಇರಲಿಲ್ಲ. ಹೀಗಿರುವಾಗ ಇವರು ಹೇಗೆ ಪಕ್ಷ ಸಂಘಟನೆ ಮಾಡಿದರು ಎಂದು ಪ್ರಶ್ನಿಸಿದರು.

Key words: kambali- CM basavaraja bommai-former CM-Siddaramaiah-tong

ENGLISH SUMMARY….

“Will he get respect as soon as he wears a rug?” Siddaramaiah on CM Bommai
Bengaluru, October 26, 2021 (www.justkannada.in): The war of words between the political leaders has continued. Opposition leader Siddaramaiah today said, “CM Bommai is seen seeking votes by wearing a rug. Will he get the respect by just wearing it?”
Speaking in Bengaluru today, Siddaramaiah said, “Who prepares blankets? Is it not Kurubas? Will the people who belong to CM Bommai’s caste make blankets? If so for whom should the credit and effort belong, is it not Kurubas? Will he earn respect just by wearing it?”
In his response to the BJP leader’s statement that Siddaramaiah is doing caste-based politics, Siddaramaih said, “It is the humanists who created the caste system. Should we learn a lesson from them,?” he questioned. “Who created the four races, categories? Now, who is proposing it? It is the humanists who created it. Humanists mean BJP people. We don’t have to learn lessons from them,” he added.
Keywords: Opposition leader Siddaramaiah/ BJP/ byelection