ವಿಕ್ರಂ ಡೈರೆಕ್ಟರ್’ಗೆ ಭರ್ಜರಿ ಗಿಫ್ಟ್ ನೀಡಿದ ಕಮಲ್ ಹಾಸನ್

Promotion

ಬೆಂಗಳೂರು, ಜೂನ್ 08, 2022 (www.justkannada.in): ವಿಕ್ರಂ ಚಿತ್ರ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ನಿರ್ದೇಶಕ ಲೋಕೇಶ್ ‌ ಕನಘರಾಜ್ ‌ ಗೆ ಭರ್ಜರಿ ಉಡುಗೊರೆ ನೀಡಿದ್ದಾರೆ  ನಟ ಕಮಲ್ ‌ ಹಾಸನ್.

ಹೌದು. ವಿಕ್ರಂ ಚಿತ್ರ ಉತ್ತಮವಾಗಿ ನಿರ್ದೇಶಿಸಿದ್ದಕ್ಕಾಗಿ ಕಾರ್ತಿಕ್ ‌ ಕನಘರಾಜ್ ‌ ಗೆ ಕಮಲ್ ‌ ಹಾಸನ್ ‌ ದುಬಾರಿ ಬೆಲೆಯ ಲೆಕ್ಸುಸ್ ‌ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ .

ವಿಕ್ರಂ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು , ಬಿಡುಗಡೆಯಾದ ಕೆಲವೇ ದಿನಗಳಲ್ಲಿ 175 ಕೋಟಿ ರೂ . ಬಾಚಿಕೊಂಡಿದೆ . ಇದೇ ಖುಷಿಯಲ್ಲಿ ಚಿತ್ರದ ನಿರ್ದೇಶಕನಿಗೆ ಕಮಲ್ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಅಂದಹಾಗೆ ವಿಕ್ರಂ ಚಿತ್ರದಲ್ಲಿ ವಿಜಯ್ ‌ ಸೇತುಪಥಿ ಸೇರಿದಂತೆ ಹಲವು ಸ್ಟಾರ್ ‌ ನಟರು ನಟಿಸಿದ್ದರು . ಕಮಲ್ ‌ ಹಾಸನ್ ‌ ಕಾರಿನ ಕೀ ನೀಡುತ್ತಿರುವ ಫೋಟೊವನ್ನು ಕಾರ್ತಿಕ್ ‌ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.