Promotion
ಕಲ್ಬುರ್ಗಿ,ಮಾರ್ಚ್,23,2023(www.justkannada.in): ಕಲ್ಬುರ್ಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೇರಿದ್ದು, ಮೇಯರ್ ಆಗಿ ವಿಶಾಲ್ ದರ್ಗಿ ಆಯ್ಕೆಯಾಗಿದ್ದಾರೆ.
ಕಲ್ಬುರ್ಗಿ ಪಾಲಿಕೆ ನೂತನ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ವಿಶಾಲ್ ದರ್ಗಿ ಉಪಮೇಯರ್ ಆಗಿ ಶಿವಾನಂದ ಪಿಸ್ತಿ ಆಯ್ಕೆಯಾಗಿದ್ದಾರೆ. 65 ಮತಗಳ ಪೈಕಿ 33 ಮತಗಳು ಬಿಜೆಪಿಗೆ ಬಿದ್ದಿವೆ. 32 ಮತ ಗಳಿಸಿ ಕಾಂಗ್ರೆಸ್ ಒಂದೇ ಒಂದು ಮತದಿಂದ ಸೋಲನುಭವಿಸಿದೆ.
ಈ ಮೂಲಕ 12 ವರ್ಷಗಳ ಬಳಿಕ ಬಿಜೆಪಿ ಕಲ್ಬುರ್ಗಿಯ ಪಾಲಿಕೆಯ ಗದ್ದುಗೆಗೇರಿದೆ.
Key words: Kalburgi- Corporation – BJP -Vishal Dargi- elected – Mayor.