ಲಾಕ್ ಡೌನ್ ಉಲ್ಲಂಘನೆ : ನಿನ್ನೆ, ಮೊನ್ನೆ ಲಾಠಿ ಏಟು, ಬಸ್ಕಿ ಹೊಡೆಸಿದ ಪೊಲೀಸರು ಇಂದೇನು ಮಾಡಿಸಿದ್ರು ಗೊತ್ತ..?

Promotion

 

ಕಲಬುರಗಿ, ಮಾ.26, 2020 : (www.justkannada.in news) ಲಾಕ್ ಡೌನ್ ಆದೇಶ ಪಾಲಿಸದ ಯುವಕರಿಗೆ ಕಲಬುರಗಿ ಪೊಲೀಸರು ಗುರುವಾರ ರಸ್ತೆ ಕಸ ಗುಡಿಸುವ ವಿನೂತನ ಶಿಕ್ಷೆ ನೀಡಿದ್ದಾರೆ.

ಭಾರತ್ ಲಾಕ್ ಡೌನ್ ಹಿನ್ನೆಲೆ ಬೆಳಿಗ್ಗೆಯಿಂದ ನಗರ, ಜಿಲ್ಲೆಯಾದ್ಯಂತ ಅಗತ್ಯ ವಸ್ತುಗಳು ಹೊರತಿಪಡಿಸಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿವೆ. ಆದ್ರು ಕೆಲ ಯುವಕರು ಕೊರೊನಾ ವೈರಸ್ ನ ಗಂಭೀರತೆ ಅರಿಯದೇ ಅನಗತ್ಯವಾಗಿ ರಸ್ತೆಗಳಲ್ಲಿ ತಿರುಗಾಡುತ್ತಿದ್ದರು. ಇಂಥ ಬೈಕ್ ಸವಾರರನ್ನು ತಡೆದ ಪೊಲೀಸರು, ನಗರದ ಪ್ರಕಾಶ್ ಏಷಿಯನ್ ಮಾಲ್ ಬಳಿ ರಸ್ತೆ ಗುಡಿಸುವ ಪನಿಷ್ಮೆಂಟ್ ಕೊಟ್ಟಿದ್ದಾರೆ.

kalbargi-police-youth-punishment-corona-lock.down

ಸುಮಾರು ಅರ್ಧ ಗಂಟೆಗಳ ಕಾಲ ಕಸ ಗುಡಿಸಿದ ಬಳಿಕ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಿ ಯುವಕರಿಗೆ ಪೊಲೀಸರು ಮನೆಗೆ ಕಳಿಸಿದ್ದಾರೆ.
ನಿನ್ನೆ, ಮೊನ್ನೆ ಲಾಠಿ ರುಚಿ ತೋರಿಸಿ ಬಸ್ಕಿ ಹೊಡೆಸಿದ್ರು ಯುವಕರು ಎಚ್ಚೆತ್ತುಕೊಳ್ಳದ ಕಾರಣ ಪೊಲೀಸ್ರು ಇಂದು ಕಸಗುಡಿಸುವ ಪನಿಷ್ಮೆಂಟ್ ಕೊಟ್ಟು ಖಡಕ್ ಎಚ್ಚರಿಕೆ ನೀಡಿದ್ದಾರೆ.

key words : kalbargi-police-youth-punishment-corona-lock.down