ಮಾಲ್ಡಿವ್ಸ್’ನಲ್ಲಿ ಫ್ಯಾಮಿಲಿ ಜೊತೆ ಜಾಲೀ ಮೂಡ್’ನಲ್ಲಿ ಕಾಜಲ್ !

Promotion

ಬೆಂಗಳೂರು, ಡಿಸೆಂಬರ್ 2, 2019 (www.justkannada.in): ನಟಿ ಕಾಜಲ್ ಅಗರ್ ವಾಲಾ ಇದೀಗ ಕುಟುಂಬದವರೊಂದಿಗೆ ಹಾಲಿಡೇ ಮೂಡ್ ನಲ್ಲಿದ್ದು, ಮಾಲ್ಡಿವ್ಸ್ ಗೆ ತೆರಳಿದ್ದಾರೆ.

ತಂಗಿ ಮತ್ತು ಪೋಷಕರೊಂದಿಗಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಕಾಜಲ್ ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ.

ಹಿಂದಿ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತುಂಬಾ ಹೆಸರು ಮಾಡಿದ್ದಾರೆ. ಹಾಗೆಯೇ ಕನ್ನಡದಲ್ಲಿ ಪುನೀತ್ ರಾಜಕುಮಾರ್ ನಟನೆಯ `ಚಕ್ರವ್ಯೂಹ’ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ.