ಫೇಸ್ ಬುಕ್ ಪೇಜ್ ಮೂಲಕ 5 ಮಿಲಿಯನ್ ಮುಟ್ಟಿದ ‘JUST ಕನ್ನಡ’ …!

justkannada-online-news-portal-reach-5 million-of-Facebook-page- new milestone

Promotion

 

ಮೈಸೂರು, ನ.30, 2021 : (www.justkannada.in news ) ಪ್ರೀತಿಯ ನೆಟಿಝನ್ಸ್ ಗೆ ಅನಂತ ಅನಂತ ನಮನಗಳು. ಸಂತಸದ ವಿಚಾರವೊಂದನ್ನ ನಿಮ್ಮ ಬಳಿ ಹಂಚಿಕೊಳ್ಳುವ ಕಾತರ ನಮ್ಮದಾಗಿದೆ.

ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಪ್ರೋತ್ಸಾಹದ ಸಹಕಾರದಿಂದ ‘ಜಸ್ಟ್ ಕನ್ನಡ’ ಜಾಲತಾಣದಲ್ಲಿ ಮತ್ತೊಂದು ದಾಖಲೆಯ ಮೈಲುಗಲ್ಲು ಸವೆಸಿದೆ. ಫೇಸ್ ಬುಕ್ ಪೇಜ್ ಮೂಲಕ ಬರೋಬ್ಬರಿ 5 ಮಿಲಿಯನ್ ವೀಕ್ಷಣೆ ಪಡೆಯುವುದರ ಜತೆಗೆ ( ನ.02 ರಿಂದ 29 ) ಏರುಗತಿಯಲ್ಲೇ ಮುಂದೆ ಸಾಗುತ್ತಿದೆ. ಆ ಮೂಲಕ ‘ ಜಸ್ಟ್ ಕನ್ನಡದ’ ಕಳೆದ ವರ್ಷದ ರೆಕಾರ್ಡ್ ಬ್ರೇಕ್ ಮಾಡಿ ಮತ್ತೊಂದು ದಾಖಲೆಗೆ ಮುನ್ನುಡಿ ಬರೆದಿದೆ. ಅದು ರಾಜ್ಯೋತ್ಸವದ ತಿಂಗಳಲ್ಲೇ ಈ ಗುರಿ ಮುಟ್ಟಿರುವುದು ಹೆಮ್ಮೆಯ ಸಂಗತಿಯೇ ಸರಿ.

ಕಳೆದ 12 ವರ್ಷಗಳಿಂದ ಮಾಧ್ಯಮ ಕ್ಷೇತ್ರದ ಸ್ನೇಹಿತರು ಮತ್ತು ಹಿತೈಷಿಗಳ ಸಹಕಾರ ಮರೆಯಲಾಗದು. ಈ ಎಲ್ಲರ ಪ್ರೋತ್ಸಾಹದ ಕಾರಣದಿಂದ ‘ಜಸ್ಟ್ ಕನ್ನಡ’ ಇಂದು ಒಂದು ಸಣ್ಣ ದಾಖಲೆಯ ಹೆಜ್ಜೆ ಇರಿಸಲು ಸಾಧ್ಯವಾಗಿದೆ.

ಅಂದಹಾಗೆ, ಈ ಸಾಧನೆಗೆ ನಮಗೆ ಸ್ಪೂರ್ತಿದಾತರು, ಬೆನ್ನುಲುಬಾಗಿ ನಿಂತವರು, ಪ್ರತಿ ಹಂತದಲ್ಲೂ ಕೈ ಹಿಡಿದು ನಡೆಸಿದವರು, ತಪ್ಪಾದಾಗ ತಿದ್ದಿ, ಸರಿ ಇದ್ದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು, ನಮ್ಮ ಸುದ್ದಿಗಳಿಗೆ ಸದಾ ಬೆನ್ನೆಲುಬಾಗಿ ನಿಂತವರು ಬೇರಾರು ಅಲ್ಲ. ನೀವು ಮಾತ್ರ..! ಕೇವಲ ನೀವು ಮಾತ್ರ..!! ಈ ಕಾರಣಕ್ಕಾಗಿ ನಿಮ್ಮೆಲ್ಲರಿಗೂ ಹೃದಯಪೂರ್ವಕ ವಂದನೆಗಳು.
ನಿಮ್ಮ ಬೆಂಬಲ,ಪ್ರೀತಿ ತುಂಬಿದ ಆಶೀರ್ವಾದ ಸದಾ ಹೀಗೆ ಇರಲಿ. ಇದೇ ರೀತಿ ನಮ್ಮನ್ನ ಅಪ್ಪಿಕೊಳ್ಳಿ, ಒಪ್ಪಿಕೊಳ್ಳಿ ಎಂದು ಹೇಳುತ್ತಾ ನಿಮಗೆ ಧನ್ಯವಾದಗಳನ್ನು ಸಮರ್ಪಿಸುತ್ತಿರುವ ನಿಮ್ಮ ‘ ಜಸ್ಟ್ ಕನ್ನಡ’ ತಂಡ.

KEY WORDS : justkannada-online-news-portal-reach-5 million-of-Facebook-page- new milestone

 

ENGLISH SUMMARY :

Justkannada.in reaches 5 million mark on Facebook

November 29, 2021 (www.justkannada.in): Salutes to all our adorable netizens. We like to share a piece of good news with you.
Justkannada.in has reached a new milestone in the internet world with all your blessings, love, and encouragement. We have reached the 5 million mark on Facebook (views between November 02 and 29) and still marching ahead. With this Juskannada.in has broken its last year’s record and galloping ahead. Reaching this significant milestone during the month of Kannada Rajyotsava is very special to us and has made us feel proud.


The cooperation and support of our media friends and well-wishers in the last 12 years are immense. We have reached this humble milestone only because of the love and support of all of you.
We extend our heartfelt gratitude to all our inspirers, all those who stood as a backbone, those who guided us at every level, who rectified us, those who encouraged us, appreciated our efforts. All this has been possible only because of our readers. Thanks once again.
We wish you will continue to extend your love and support to us and help us to grow further.

Keywords: Justkannada.in/ new milesone/ 50 lakh mark/ Facebook