ಜ್ಯುಬಿಲಿಯಂಟ್’ಗೂ ತಬ್ಲಿಖಿ ಸಭೆ ನಂಟು: ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಮಾಹಿತಿ

Promotion

ಮೈಸೂರು, ಮೇ 8, 2020 (www.justkannada.in): ಬೆಂಗಳೂರಿನಲ್ಲಿ ತಬ್ಲಿಘಿಗಳ ಸಭೆ ನಡೆದಿತ್ತು. ಆ ಸಭೆಗೆ ಜುಬಿಲಿಯಂಟ್ ಕಾರ್ಖಾನೆಯ ಕಾರ್ಮಿಕ ಹೋಗಿ ಬಂದಿದ್ದ ಎಂಬುದು ಮೊದಲ ಕಾರಣವೆಂದು ಗುರುತಿಸಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಹೇಳಿದ್ದಾರೆ.

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮೈಸೂರನ್ನು ಕೆಂಪು ವಲಯದಿಂದ ಕಿತ್ತಳೆ ವಲಯಕ್ಕೆ ಬದಲಾಯಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇವೆ ತಿಳಿಸಿದ್ದಾರೆ.

ಕ್ವಾರೆಂಟೈನ್ ಸಂಖ್ಯೆಯೂ ಸಂಪೂರ್ಣ ಇಳಿದಿದೆ ಎಂದು ಹೇಳಿದ್ದಾರೆ. 90 ಪಾಸಿಟಿವ್ ಪ್ರಕರಣದಿಂದ ಈಗ 7 ಕ್ಕೆ ಬಂದಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ರೈತರಿಗೆ ಓಡಾಟಕ್ಕೆ ಅನುಕೂಲವಾಗಲಿ ಎಂದು ಗಡಿಭಾಗವನ್ನು ಓಡಾಟಕ್ಕೆ ಸ್ವಲ್ಪ ಸಡಿಲಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.